28-12-2023

2023 ರಲ್ಲಿ ಟೆಸ್ಟ್ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ಭಾರತೀಯ ಪ್ಲೇಯರ್ಸ್

Author: Vinay Bhat

ಕೆಎಸ್ ಭರತ್

ಫೆಬ್ರವರಿ 9 ರಂದು ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೆಎಸ್ ಭರತ್ ಚೊಚ್ಚಲ ಟೆಸ್ಟ್ ಆಡಿದರು. ಈವರೆಗೆ ಒಟ್ಟು 5 ಟೆಸ್ಟ್ ಪಂದ್ಯಗಳಲ್ಲಿ 129 ರನ್ ಗಳಿಸಿದ್ದಾರೆ.

ಸೂರ್ಯಕುಮಾರ್

ಸೂರ್ಯಕುಮಾರ್ ಯಾದವ್ ಅವರು ಫೆಬ್ರವರಿ 9, 2023 ರಂದು ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕಾಗಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು.

ಕೇವಲ 1 ಟೆಸ್ಟ್

ಸೂರ್ಯಕುಮಾರ್ ಯಾದವ್ 2023 ರಲ್ಲಿ ಭಾರತಕ್ಕಾಗಿ ಕೇವಲ ಒಂದು ಟೆಸ್ಟ್ ಪಂದ್ಯವನ್ನು ಆಡಿದರು ಮತ್ತು ಮೊದಲ ಇನ್ನಿಂಗ್ಸ್‌ನಲ್ಲಿ 8 ರನ್ ಗಳಿಸಿದರು.

ಇಶಾನ್ ಕಿಶನ್

ಇಶಾನ್ ಕಿಶನ್ ಜುಲೈ 12, 2023 ರಂದು ಭಾರತಕ್ಕಾಗಿ 306 ನೇ ಟೆಸ್ಟ್ ಆಟಗಾರರಾದರು. ಒಟ್ಟು ಮೂರು ಇನ್ನಿಂಗ್ಸ್‌ಗಳಲ್ಲಿ, ಕಿಶನ್ 78 ರನ್ ಗಳಿಸಿದ್ದಾರೆ.

ಯಶಸ್ವಿ ಜೈಸ್ವಾಲ್

ಯಶಸ್ವಿ ಜೈಸ್ವಾಲ್ 2023 ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ನಾಲ್ಕನೇ ಭಾರತೀಯರಾದರು. ಡೊಮಿನಿಕಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 171 ರನ್ ಗಳಿಸಿದರು.

ಮುಖೇಶ್ ಕುಮಾರ್

ವೇಗಿ ಮುಕೇಶ್ ಕುಮಾರ್ ಕೂಡ 2023 ರಲ್ಲಿ ಭಾರತಕ್ಕೆ ಟೆಸ್ಟ್ ಪದಾರ್ಪಣೆ ಮಾಡಿದರು. ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಇವರು ಎರಡು ವಿಕೆಟ್‌ಗಳನ್ನು ಪಡೆದರು.

ಪ್ರಸಿದ್ಧ್ ಕೃಷ್ಣ

ಪ್ರಸಿದ್ಧ್ ಕೃಷ್ಣ ಭಾರತಕ್ಕಾಗಿ ಟೆಸ್ಟ್ ಪಂದ್ಯಗಳನ್ನು ಆಡಿದ 309 ನೇ ಆಟಗಾರ. ಡಿ. 26 ರಂದು ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಪಂದ್ಯ ಆಡುತ್ತಿದ್ದಾರೆ.