ದಕ್ಷಿಣ ಆಫ್ರಿಕಾದಲ್ಲಿ 5 ವಿಕೆಟ್‌ ಕಬಳಿಸಿದ ಭಾರತೀಯರು

26 December 2023

Author: Vinay Bhat

ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ದಕ್ಷಿಣ ಆಫ್ರಿಕಾದಲ್ಲಿ ಆಡಿದ 8 ಟೆಸ್ಟ್‌ಗಳಲ್ಲಿ ಮೂರು ಬಾರಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.

ಜಾವಗಲ್ ಶ್ರೀನಾಥ್

ದಕ್ಷಿಣ ಆಫ್ರಿಕಾದಲ್ಲಿ ಆಡಿದ ಮೂರು ಟೆಸ್ಟ್ ಪಂದ್ಯಗಳ ಆರು ಇನ್ನಿಂಗ್ಸ್‌ಗಳಲ್ಲಿ, ವೆಂಕಟೇಶ್ ಪ್ರಸಾದ್ ಎರಡು ಬಾರಿ 5 ಬ್ಯಾಟರ್‌ಗಳನ್ನು ಔಟ್ ಮಾಡಿದ್ದಾರೆ.

ವೆಂಕಟೇಶ್ ಪ್ರಸಾದ್

ಆಫ್ರಿಕಾದಲ್ಲಿ ಪ್ರೋಟೀಸ್ ವಿರುದ್ಧದ ಆರು ಟೆಸ್ಟ್‌ಗಳಲ್ಲಿ, ಶ್ರೀಶಾಂತ್ ಎರಡು ಸಲ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಶ್ರೀಶಾಂತ್

ಬುಮ್ರಾ ಅವರು ದಕ್ಷಿಣ ಆಫ್ರಿಕಾದಲ್ಲಿ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 12 ಇನ್ನಿಂಗ್ಸ್‌ಗಳಲ್ಲಿ ಎರಡು ಬಾರಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.

ಜಸ್ಪ್ರೀತ್ ಬುಮ್ರಾ

ದಕ್ಷಿಣ ಆಫ್ರಿಕಾದಲ್ಲಿ ಆಡಿದ 8 ಟೆಸ್ಟ್‌ಗಳಲ್ಲಿ ಶಮಿ ಒಟ್ಟು 35 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ ಎರಡು ಬಾರಿ ಐದು ವಿಕೆಟ್ ಕಬಳಿಸಿದ್ದಾರೆ.

ಮೊಹಮ್ಮದ್ ಶಮಿ

ರವೀಂದ್ರ ಜಡೇಜಾ ಅವರು ದಕ್ಷಿಣ ಆಫ್ರಿಕಾದಲ್ಲಿ ಒಂದು ಟೆಸ್ಟ್ ಆಡಿದ್ದಾರೆ. ಅವರು ಒಂದು ಇನ್ನಿಂಗ್ಸ್'ನಲ್ಲಿ ಆರು ವಿಕೆಟುಗಳನ್ನು ಪಡೆದರು.

ರವೀಂದ್ರ ಜಡೇಜಾ

ಠಾಕೂರ್ ಆಫ್ರಿಕಾದಲ್ಲಿ ಭಾರತೀಯ ಆಟಗಾರನ ಅತ್ಯುತ್ತಮ ಬೌಲಿಂಗ್ ದಾಖಲೆಯನ್ನು ಹೊಂದಿದ್ದಾರೆ. 2022 ರಲ್ಲಿ 61 ರನ್‌ಗಳಿಗೆ 7 ಪ್ರೋಟೀಸ್ ಬ್ಯಾಟರ್‌ಗಳನ್ನು ಔಟ್ ಮಾಡಿದರು.

ಶಾರ್ದೂಲ್ ಠಾಕೂರ್

ದಕ್ಷಿಣ ಆಫ್ರಿಕಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 12 ಟೆಸ್ಟ್ ಪಂದ್ಯಗಳಲ್ಲಿ, ಅನಿಲ್ ಕುಂಬ್ಳೆ ಒಂದು ಬಾರಿ ಐದು ವಿಕೆಟ್ ಪಡೆದಿದ್ದಾರೆ.

ಅನಿಲ್ ಕುಂಬ್ಳೆ