18-01-2024

3 ಬಾರಿ ಬ್ಯಾಟಿಂಗ್, 145 ರನ್ಸ್: ರೋಹಿತ್ ಶರ್ಮಾಗೆ ಇದು ಪ್ರಯೋಜನವಾಗಿಲ್ಲ

Author: Vinay Bhat

ಭಾರತಕ್ಕೆ ಜಯ

ಬೆಂಗಳೂರಿನಲ್ಲಿ ನಡೆದ ಭಾರತ-ಅಫ್ಘಾನಿಸ್ತಾನ ನಡುವಣ ತೃತೀಯ ಟಿ20 ಪಂದ್ಯ ಎರಡು ಸೂಪರ್ ಓವರ್‌ಗಳ ಮೂಲಕ ಕೊನೆಗೊಂಡಿತು. ಇದರಲ್ಲಿ ಟೀಮ್ ಇಂಡಿಯಾ ಜಯಿಸಿತು.

40 ಓವರ್‌

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ  212 ರನ್ ಗಳಿಸಿದರೆ, ಬಳಿಕ ಅಫ್ಘಾನಿಸ್ತಾನ ಕೂಡ ಸ್ಕೋರ್ ಸಮಬಲಗೊಳಿಸಿತು.

ಡಬಲ್ ಸೂಪರ್ ಓವರ್‌

ಮೊದಲ ಸೂಪರ್ ಓವರ್‌ನಲ್ಲಿ ಅಫ್ಘಾನಿಸ್ತಾನ 16 ರನ್ ಗಳಿಸಿತು. ಭಾರತ ಕೂಡ ಅಷ್ಟೇ ರನ್ ಗಳಿಸಿತು. ಎರಡನೇ ಸೂಪರ್ ಓವರ್‌ನಲ್ಲಿ ಭಾರತ 11 ರನ್ ಗಳಿಸಿದರೆ, ಅಫ್ಘಾನ್ 1 ರನ್‌ಗೆ ಆಲೌಟ್ ಆಯಿತು.

ರೋಹಿತ್ ಆಟ

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅಬ್ಬರಿಸಿರು. 3 ಬಾರಿ ಬ್ಯಾಟ್ ಮಾಡಿ ಒಟ್ಟು 145 ರನ್ ಗಳಿಸಿದರು. ಆದರೆ ಇದು ರೋಹೊತ್'ಗೆ ಪ್ರಯೋಜನವಾಗಲಿಲ್ಲ.

ರನ್ ಮಳೆ

ರೋಹಿತ್ ದಾಖಲೆಯ 5ನೇ ಶತಕ ಹಾಗೂ 121 ರನ್ ಗಳಿಸಿದರು. ನಂತರ ಮೊದಲ ಸೂಪರ್ ಓವರ್‌ನಲ್ಲಿ 13, 2ನೇಯಲ್ಲಿ 11 ರನ್ ಗಳಿಸಿದರು. ಒಟ್ಟಾರೆ 145 ರನ್ ಬಂದವು.

3 ಬಾರಿ ಬ್ಯಾಟಿಂಗ್

ಇಷ್ಟು ರನ್ ಗಳಿಸುವ ಮೂಲಕ ರೋಹಿತ್ ಟೀಮ್ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದರು ಆದರೆ 3 ಬಾರಿ ಬ್ಯಾಟಿಂಗ್ ಮಾಡಿದ ನಂತರವೂ ನಷ್ಟ ಅನುಭವಿಸಿದರು.

24 ರನ್‌

ವಾಸ್ತವವಾಗಿ, 145 ರನ್ ಗಳಿಸಿದ ನಂತರವೂ ರೋಹಿತ್ ಶರ್ಮಾ ಅವರ ಖಾತೆಗೆ 121 ರನ್ ಮಾತ್ರ ಸೇರ್ಪಡೆಯಾಗಲಿದೆ.

ನಿಯಮ

ನಿಯಮಗಳ ಪ್ರಕಾರ, ಸೂಪರ್ ಓವರ್‌ನಲ್ಲಿ ಗಳಿಸಿದ ರನ್ ಅಥವಾ ವಿಕೆಟ್‌ಗಳನ್ನು ಆಟಗಾರರ ಖಾತೆಗೆ ಸೇರಿಸಲಾಗುವುದಿಲ್ಲ. ಈ ಮೂಲಕ ರೋಹಿತ್ ಖಾತೆಗೆ 24 ರನ್ ಬಂದಿಲ್ಲ.