ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಶತಕದ ಸಾಧನೆ. ಧೋನಿ, ಕೊಹ್ಲಿ ಗುಂಪಿಗೆ ಸೇರ್ಪಡೆ.

21 February 2025

Author: Ganapathi Sharma

ಬಾಂಗ್ಲಾದೇಶ ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ನಾಯಕನಾಗಿ ಶತಕದ ಸಾಧನೆ ಮಾಡಿದ ಹಿಟ್​ಮ್ಯಾನ್.

229 ರನ್ ಚೇಸ್ ಮಾಡುವ ಮೂಲಕ ಬಾಂಗ್ಲಾದೇಶವನ್ನು ಟೀಂ ಇಂಡಿಯಾ 6 ವಿಕೆಟ್​​ಗಳಿಂದ ಮಣಿಸಿತು.

ಶುಭಮನ್ ಗಿಲ್ ಶತಕದ ನೆರವಿನಿಂದ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲುವಿನ ಪಯಣ ಆರಂಭಿಸಿತು.

ತಂಡದ ಗೆಲುವಿನೊಂದಿಗೆ ರೋಹಿತ್ ಶರ್ಮಾ ನಾಯಕನಾಗಿ ವಿಶೇಷ ಸಾಧನೆ ಮಾಡಿದರು.

ಅಂತರರಾಷ್ಟ್ರೀಯ ಕ್ರಿಕೆಟ್​​ನಲ್ಲಿ ನಾಯಕನಾಗಿ 100 ಪಂದ್ಯಗಳನ್ನು ಗೆದ್ದ ದಾಖಲೆ ಅವರದಾಯಿತು. ಕ್ಯಾಪ್ಟನ್ ಆಗಿ ಅವರು 138 ಪಂದ್ಯಗಳನ್ನಾಡಿದ್ದಾರೆ.

ಈ ಮೂಲಕ ಎಲ್ಲ ಮೂರು ಮಾದರಿಯ ಕ್ರಿಕೆಟ್​​ನಲ್ಲಿ ಒಟ್ಟಾಗಿ, ನಾಯಕನಾಗಿ 100 ಪಂದ್ಯಗಳನ್ನು ಗೆದ್ದ ನಾಲ್ಕನೇ ಭಾರತೀಯ ಎನಿಸಿಕೊಂಡರು.

ನಾಯಕನಾಗಿ ಎಂಎಸ್​ ಧೋನಿ (179), ವಿರಾಟ್ ಕೊಹ್ಲಿ (137) ಹಾಗೂ ಅಜರುದ್ದೀನ್ (104) ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.

NEXT - ಜಮೀನಿಗೆ ಮಾಡೆಲ್ ಗಳ ಅರೆನಗ್ನ ಫೋಟೋ ಅಳವಡಿಸಿದ ರೈತ!