ದೃಷ್ಟಿ ಗೊಂಬೆಯಾಗಿ ಜಮೀನಿಗೆ ಮಾಡೆಲ್​ಗಳ ಅರೆನಗ್ನ ಫೋಟೋ ಅಳವಡಿಸಿದ ರೈತ!

20 February 2025

Author: Ganapathi Sharma

ಜಮೀನಿಗೆ ದೃಷ್ಟಿಯಾಗಬಾರದು ಎಂದು ರೈತರೊಬ್ಬರು ಭೂತದ ಮುಖವಾಡಗಳ ಬದಲು ಮಾಡೆಲ್‌‌ಗಳ ಭಾವಚಿತ್ರ ಅಳವಡಿಸಿದ್ದಾರೆ.

ನಂಜನಗೂಡು ತಾಲೂಕಿನ ಕಕ್ಕರಹಟ್ಟಿ ಗ್ರಾಮದಲ್ಲಿ ಈ ಫೋಟೊಗಳನ್ನು ಹಾಕಲಾಗಿದೆ.

ಮಾಡೆಲ್​​ಗಳು ಅರೆಬೆತ್ತಲೆಯಾಗಿ ಇರುವ ಫೋಟೋಗಳನ್ನು ಅಳವಡಿಕೆ ಮಾಡಲಾಗಿದೆ.

ನಂಜನಗೂಡಿನಿಂದ ಮಡಹಳ್ಳಿ ಹಾಗೂ ತಗಡೂರು ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ ಜಮೀನು ಇದಾಗಿದೆ.

ಕಕ್ಕರಹಟ್ಟಿ ಗ್ರಾಮದ ರೈತ ಸೋಮೇಶ್‌ರಿಂದ ಮಾಡೆಲ್​ಗಳ ಫೋಟೊ ಅಳವಡಿಕೆ ಮಾಡಲಾಗಿದೆ.

ನಾಲ್ಕು ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ಸೊಗಸಾಗಿ ಮೂಡಿ ಬಂದಿದೆ. ದೃಷ್ಟಿಬೀಳಬಾರದು ಎಂದು ಹೀಗೆ ಮಾಡಿದ್ದಾಗಿ ರೈತ ಹೇಳಿದ್ದಾರೆ.

ಬೆಳೆ ಮೇಲೆ ಯಾರ ದೃಷ್ಟಿ ಬೀಳಬಾರದು ಎಂಬ ಕಾರಣಕ್ಕೆ ದೃಷ್ಟಿ ಬೊಂಬೆ ಅಳವಡಿಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

NEXT - ಶಿವಾಜಿ ಪ್ರತಿಮೆಗೆ ನಮಿಸಿದ ವಿಕ್ಕಿಕೌಶಲ್