16-12-2023

ಐಪಿಎಲ್‌ನಲ್ಲಿ ಪ್ರತಿ ತಂಡದ ವಿರುದ್ಧ ರೋಹಿತ್ ಶರ್ಮಾ ನಾಯಕತ್ವದ ದಾಖಲೆ ಹೇಗಿದೆ?

Author: ಪೃಥ್ವಿ ಶಂಕರ

ರೋಹಿತ್ ಶರ್ಮಾ ಸಿಎಸ್​ಕೆ ವಿರುದ್ಧ 22 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಇದರಲ್ಲಿ ತಂಡ 12ಪಂದ್ಯಗಳಲ್ಲಿ ಗೆದ್ದಿದ್ದರೆ 10ಪಂದ್ಯಗಳಲ್ಲಿ ಸೋಲು ಕಂಡಿದೆ.

ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ರೋಹಿತ್ ಶರ್ಮಾ ನಾಯಕನಾಗಿ ಒಂದೇ ಒಂದು ಪಂದ್ಯವನ್ನು ಆಡಿದ್ದು, ಅದರಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.

ಕೆಕೆಆರ್ ವಿರುದ್ಧ 21 ಪಂದ್ಯಗಳಲ್ಲಿ ನಾಯಕತ್ವವಹಿಸಿರುವ ರೋಹಿತ್, 14 ಪಂದ್ಯಗಳಲ್ಲಿ ಯಶಸ್ವಿಯಾಗಿದ್ದರೆ, 7 ಪಂದ್ಯಗಳಲ್ಲಿ ಸೋಲು ಎದುರಿಸಿದ್ದಾರೆ.

ಗುಜರಾತ್ ಲಯನ್ಸ್ ವಿರುದ್ಧ ನಾಯಕನಾಗಿ 4 ಪಂದ್ಯಗಳನ್ನು ಆಡಿರುವ ರೋಹಿತ್ 2 ಪಂದ್ಯಗಳಲ್ಲಿ ಸೋಲು, 1 ಪಂದ್ಯದಲ್ಲಿ ಗೆಲುವು ಮತ್ತು 1 ಪಂದ್ಯದಲ್ಲಿ ಡ್ರಾ ಸಾಧಿಸಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ 20 ಪಂದ್ಯಗಳನ್ನು ಆಡಿರುವ ರೋಹಿತ್, ಅದರಲ್ಲಿ 11 ಪಂದ್ಯಗಳನ್ನು ಗೆದ್ದಿದ್ದಾರೆ. 8 ಪಂದ್ಯಗಳಲ್ಲಿ ಸೋಲು ಎದುರಿಸಬೇಕಾಗಿ ಬಂದರೆ, 1 ಪಂದ್ಯ ಸಮಬಲಗೊಂಡಿದೆ.

ರೋಹಿತ್ ಶರ್ಮಾ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 22 ಪಂದ್ಯಗಳಲ್ಲಿ ನಾಯಕರಾಗಿದ್ದಾರೆ. ಇದರಲ್ಲಿ 11 ಪಂದ್ಯಗಳಲ್ಲಿ ಗೆದ್ದಿದ್ದರೆ, 9 ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ.

ಆರ್​ಸಿಬಿ ವಿರುದ್ಧ 19 ಪಂದ್ಯಗಳಲ್ಲಿ ನಾಯಕನಾಗಿ 11 ಪಂದ್ಯಗಳನ್ನು ಗೆದ್ದಿರುವ ರೋಹಿತ್, 7 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. 1 ಪಂದ್ಯ ಟೈ ಆಗಿದೆ.

ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ ರೋಹಿತ್ 6 ಪಂದ್ಯಗಳ ನಾಯಕತ್ವ ವಹಿಸಿದ್ದು, ಈ ಪೈಕಿ ಮುಂಬೈ 4ರಲ್ಲಿ ಗೆದ್ದು 2ರಲ್ಲಿ ಸೋತಿದೆ.

ಲಕ್ನೋ ವಿರುದ್ಧ ಆಡಿದ 4 ಪಂದ್ಯಗಳ ಪೈಕಿ ರೋಹಿತ್ ಶರ್ಮಾ ನಾಯಕನಾಗಿ ಕೇವಲ 1 ಪಂದ್ಯ ಗೆದ್ದಿದ್ದಾರೆ. 3ರಲ್ಲಿ ಸೋಲನುಭವಿಸಿದ್ದಾರೆ.

ಗುಜರಾತ್ ಟೈಟಾನ್ಸ್ ವಿರುದ್ಧ ನಾಯಕನಾಗಿ ಆಡಿರುವ 4 ಪಂದ್ಯಗಳ ಪೈಕಿ ರೋಹಿತ್ 2ರಲ್ಲಿ ಗೆದ್ದು 2ರಲ್ಲಿ ಸೋತಿದ್ದಾರೆ.

ರಾಜಸ್ಥಾನ್ ವಿರುದ್ಧ 16 ಪಂದ್ಯಗಳಲ್ಲಿ ರೋಹಿತ್ ಶರ್ಮಾ ನಾಯಕರಾಗಿದ್ದ್ದು, ಅದರಲ್ಲಿ 10 ಪಂದ್ಯಗಳಲ್ಲಿ ಗೆಲುವು ಮತ್ತು 6 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.

ನಾಯಕನಾಗಿ ಹೈದರಾಬಾದ್ ವಿರುದ್ಧ 21 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 11 ಪಂದ್ಯದಗಳಲ್ಲಿ ಗೆದ್ದಿದ್ದರೆ, 9 ಪಂದ್ಯಗಳಲ್ಲಿ ಸೋತಿದ್ದಾರೆ.1 ಪಂದ್ಯ ಟೈ ಆಗಿದೆ.