30-10-2023
ಒಂದಲ್ಲ ಎರಡಲ್ಲ: ರೋಹಿತ್ ಶರ್ಮಾ ನಿರ್ಮಿಸಿದ್ದು 10 ದಾಖಲೆ
ರೋಹಿತ್ ಶರ್ಮಾ
ವಿಶ್ವಕಪ್'ನಲ್ಲಿ ಭಾನುವಾರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 87 ರನ್ ಸಿಡಿಸಿ ಹಲವು ದಾಖಲೆ ನಿರ್ಮಿಸಿದರು.
7ನೇ ಆಟಗಾರ
ರೋಹಿತ್ ಶರ್ಮಾ 100 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ಏಳನೇ ಭಾರತೀಯರಾದರು.
ಅತ್ಯಧಿಕ ಗೆಲುವು
ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 100+ ಪಂದ್ಯಗಳಲ್ಲಿ ನಾಯಕತ್ವ ವಹಿಸಿರುವ ಆಟಗಾರರಲ್ಲಿ ರೋಹಿತ್ ಅತ್ಯಧಿಕ ಗೆಲುವಿನ ಶೇಕಡಾವಾರು (74) ಹೊಂದಿದ್ದಾರೆ.
ಕ್ಯಾಪ್ಟನ್ ಗೆಲುವು
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಪಂದ್ಯಗಳ ನಂತರ ನಾಯಕನಾಗಿ ಅತಿ ಹೆಚ್ಚು ಗೆಲುವು ಸಾಧಿಸಿದ ದಾಖಲೆಯನ್ನು ಕೂಡ ರೋಹಿತ್ ಹೊಂದಿದ್ದಾರೆ.
ಮೊದಲ ಭಾರತೀಯ
ರೋಹಿತ್ ಶರ್ಮಾ ಏಕದಿನ ವಿಶ್ವಕಪ್‌ನಲ್ಲಿ ಮೊದಲ ಆರು ಪಂದ್ಯಗಳನ್ನು ಗೆದ್ದ ಮೊಟ್ಟ ಮೊದಲ ಭಾರತೀಯ ನಾಯಕರಾದರು.
56 ಸಿಕ್ಸರ್
ಒಂದು ಕ್ಯಾಲೆಂಡರ್ ವರ್ಷದಲ್ಲಿ 56 ಏಕದಿನ ಸಿಕ್ಸರ್‌ಗಳನ್ನು ಬಾರಿಸಿದ ಕ್ರಿಸ್ ಗೇಲ್ ಅವರ ದಾಖಲೆಯನ್ನು ರೋಹಿತ್ ಸರಿಗಟ್ಟಿದರು.
18,000 ರನ್
ರೋಹಿತ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 18,000 ಕ್ಕೂ ಹೆಚ್ಚು ರನ್ ಗಳಿಸಿದ ಐದನೇ ಭಾರತೀಯ ಮತ್ತು ಒಟ್ಟಾರೆ 20 ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
1000+ ರನ್
ಕ್ಯಾಲೆಂಡರ್ ವರ್ಷದಲ್ಲಿ 1000+ ಏಕದಿನ ರನ್ ಗಳಿದ ಭಾರತದ ಆರನೇ ನಾಯಕ ಇದೀಗ ರೋಹಿತ್ ಶರ್ಮಾ ಆಗಿದ್ದಾರೆ.
15 ಫಿಫ್ಟಿ
ರೋಹಿತ್ ಈಗ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಹೆಸರಿಗೆ 12 50 ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ್ದಾರೆ. ಇದು ವಿರಾಟ್ ಕೊಹ್ಲಿ, ಶಕಿಬ್ ಮತ್ತು ಸಂಗಕ್ಕಾರ ಅವರಿಗೆ ಸಮಾನವಾಗಿದೆ.
ಪಂದ್ಯಶ್ರೇಷ್ಠ
ರೋಹಿತ್ ಇದುವರೆಗೆ ಆಡಿದ 23 ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಏಳು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ಸಚಿನ್ (9) ಮಾತ್ರ ಹೆಚ್ಚು ಬಾರಿ ಗೆದ್ದಿದ್ದಾರೆ.
ಗೆದ್ದ ಬಳಿಕ ಕೊಹ್ಲಿ ಬಳಿ ಬಂದ ರೈನಾ ಏನು ಮಾಡಿದ್ರು ನೋಡಿ
ಇನ್ನಷ್ಟು ಓದಿ