08-10-2023

India Playing XI: ಇಂದು ಆಡಲಿರುವ 11 ಬಲಿಷ್ಠ ಆಟಗಾರರು ಇವರೇ ನೋಡಿ

ಭಾರತ-ಆಸ್ಟ್ರೇಲಿಯಾ

ಐಸಿಸಿ ಏಕದಿನ ವಿಶ್ವಕಪ್'ನಲ್ಲಿಂದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಲಿದೆ. ಚೆನ್ನೈನಲ್ಲಿ ಈ ಪಂದ್ಯ ನಡೆಯಲಿದೆ.

ಭಾರತ ಪ್ಲೇಯಿಂಗ್ XI

ಇಂದಿನ ಪಂದ್ಯಕ್ಕೆ ಭಾರತದ ಆಡುವ ಬಳಗ ಹೇಗಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇಲ್ಲಿದೆ ನೋಡಿ ಟೀಮ್ ಇಂಡಿಯಾ ಸಂಭಾವ್ಯ ಆಟಗಾರರ ಪಟ್ಟಿ.

ಓಪನರ್​ಗಳು

ಶುಭ್​ಮನ್ ಗಿಲ್ ಅಲಭ್ಯತೆಯಲ್ಲಿ ನಾಯಕ ರೋಹಿತ್ ಶರ್ಮಾ ಜೊತೆ ಇಶಾನ್ ಕಿಶನ್ ಕಣಕ್ಕಿಳಿಯುವುದು ಬಹುತೇಕ ಖಚಿತ.

ಕೊಹ್ಲಿ-ಅಯ್ಯರ್

ಮೂರು ಮತ್ತು ನಾಲ್ಕನೇ ಸ್ಥಾನ ಕೂಡ ಖಚಿತವಾಗಿದ್ದು ಕೊಹ್ಲಿ, ಅಯ್ಯರ್ ಕಾಣಿಸಿಕೊಳ್ಳಲಿದ್ದಾರೆ. ಕೆಎಲ್ ರಾಹುಲ್ ವಿಕೆಟ್ ಕೀಪರ್ ಜವಾಬ್ದಾರಿ ಹೊರಲಿದ್ದಾರೆ.

ಆಲ್ರೌಂಡರ್ಸ್

ಭಾರತ ಪರ ಮೂವರು ಆಲ್ರೌಂಡರ್​ಗಳು ಆಡುವ ಸಂಭವವಿದೆ. ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಸ್ಥಾನ ಪಡೆಯಬಹುದು.

ಬೌಲರ್ಸ್

ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಪ್ರಮುಖ ವೇಗಿಗಳಾದರೆ ಕುಲ್ದೀಪ್ ಯಾದವ್ ಕೂಡ ಪ್ಲೇಯಿಂಗ್ XI ನಲ್ಲಿ ಕಾಣಿಸಲಿದ್ದಾರೆ.

ಸ್ಪಿನ್ ಪಿಚ್

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಸ್ಪಿನ್ ಪಿಚ್ ಆಗಿರುವುದರಿಂದ ಟೀಮ್ ಇಂಡಿಯಾ ಮೂವರು ಸ್ಪಿನ್ನರ್​ಗಳನ್ನು ಆಡಿಸುವ ಸಾಧ್ಯತೆ ಹೆಚ್ಚಿದೆ.

ವಿಶ್ವಕಪ್ ಮೊದಲ ಪಂದ್ಯದಲ್ಲೇ ಕಳ್ಳಾಟವಾಡಿತು ಪಾಕಿಸ್ತಾನ?