ಸೋತ ತಕ್ಷಣ ಅಳುತ್ತಾ ರೋಹಿತ್ ಶರ್ಮಾ ಹೋಗಿದ್ದೆಲ್ಲಿಗೆ ನೋಡಿ

20-November-2023

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್'ನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಚಾಂಪಿಯನ್ ಆಗಿದೆ.

ಆಸ್ಟ್ರೇಲಿಯಾ ಚಾಂಪಿಯನ್

ಆಸ್ಟ್ರೇಲಿಯಾ ಆರನೇ ಬಾರಿ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯಿತು. ಇತ್ತ ಟೀಮ್ ಇಂಡಿಯಾ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆಗುವ ಅವಕಾಶ ಕೈತಪ್ಪಿತು.

6ನೇ ಬಾರಿ ಚಾಂಪಿಯನ್

ಟೀಮ್ ಇಂಡಿಯಾ ಸೋಲಿನ ನಂತರ ಆಟಗಾರರು ಮತ್ತು ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಪಂದ್ಯದ ನಂತರ ನಾಯಕ ರೋಹಿತ್ ಶರ್ಮಾ ಕೂಡ ಭಾವುಕರಾದರು.

ರೋಹಿತ್ ಭಾವುಕ

ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ ಫೈನಲ್'ನಲ್ಲಿ ಸೋತ ದುಃಖವನ್ನು ತಡೆಯಲಾರದೆ ರೋಹಿತ್ ಒಬ್ಬಂಟಿಯಾಗಿ ಅಳುತ್ತಾ ಡ್ರೆಸ್ಸಿಂಗ್ ರೂಮ್ ಕಡೆಗೆ ಹೋದರು.

ಡ್ರೆಸ್ಸಿಂಗ್ ರೂಮ್​ಗೆ ರೋಹಿತ್

ವಿಶ್ವ ಚಾಂಪಿಯನ್ ಆಗುವುದು ಪ್ರತಿಯೊಬ್ಬ ನಾಯಕನ ಕನಸು. ಆದರೆ, ರೋಹಿತ್ ಅವರ ಈ ಕನಸು ಕನಸಾಗಿಯೇ ಉಳಿದಿದೆ.

ಕನಸಾಗಿಯೇ ಉಳಿಯಿತು

ರೋಹಿತ್ ಮಾತ್ರವಲ್ಲದೆ ಮೊಹಮ್ಮದ್ ಸಿರಾಜ್, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಕೂಡ ಭಾವುಕರಾಗಿ ಮೈದಾನದಲ್ಲಿ ಕಾಣಿಸಿಕೊಂಡರು.

ಸಿರಾಜ್-ರಾಹುಲ್

ರೋಹಿತ್-ಕೊಹ್ಲಿಗೆ ಕಣ್ಣೀರನ್ನು ತಡೆಯಲು ಸಾಧ್ಯವಾಗಲಿಲ್ಲ. ಇದನ್ನು ಕಂಡು ಸಚಿನ್ ತೆಂಡೂಲ್ಕರ್ ರೋಹಿತ್ ಹಾಗೂ ಕೊಹ್ಲಿಗೆ ಸಾಂತ್ವನ ಹೇಳಿದರು.

ಸಚಿನ್ ಸಾಂತ್ವಾನ

ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 240 ರನ್ ಗಳಿಸಿತ್ತು. ಆಸ್ಟ್ರೇಲಿಯಾ 43 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ಮುಟ್ಟಿತು.

ಸುಲಭ ಗುರಿ

1 ಲಕ್ಷಕ್ಕೂ ಅಧಿಕ ಫ್ಯಾನ್ಸ್: ನರೇಂದ್ರ ಮೋದಿ ಸ್ಟೇಡಿಯಂ ಎದುರು ಜನಸಾಗರ