04-12-2023

ವಿಶೇಷ ದಾಖಲೆ ಬರೆದ ರುತುರಾಜ್ ಗಾಯಕ್ವಾಡ್

ಮಿಂಚಿದ ಗಾಯಕ್ವಾಡ್

ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ರುತುರಾಜ್ ಗಾಯಕ್ವಾಡ್ ವಿಶೇಷ ದಾಖಲೆ ಬರೆದಿದ್ದಾರೆ. ಕಲೆಹಾಕಿದ್ದರು.

ರುತುರಾಜ್ ಅಬ್ಬರ

ಈ ಸರಣಿಯಲ್ಲಿ 5 ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರುತುರಾಜ್ ಒಂದು ಭರ್ಜರಿ ಶತಕದೊಂದಿಗೆ ಒಟ್ಟು 223 ರನ್​ ಕಲೆಹಾಕಿದ್ದರು.

3ನೇ ಬ್ಯಾಟರ್

ಈ ಮೂಲಕ T20 ಸರಣಿಯೊಂದರಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ ಬಾರಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡರು.

ಕೆಎಲ್ ರಾಹುಲ್ ಸಾಧನೆ

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದು ಕೆಎಲ್ ರಾಹುಲ್. ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಕೆಎಲ್​ಆರ್​ 224 ರನ್ ಬಾರಿಸುವ ಮೂಲಕ ಈ ಸಾಧನೆ ಮಾಡಿದ್ದರು.

ಕಿಂಗ್ ಕೊಹ್ಲಿ ದಾಖಲೆ

ಇನ್ನು ದ್ವಿಪಕ್ಷೀಯ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಒಟ್ಟು 231 ರನ್ ಕಲೆಹಾಕಿದ್ದರು. 

ಗಾಯಕ್ವಾಡ್ ಎಂಟ್ರಿ

ಇದೀಗ ಆಸ್ಟ್ರೇಲಿಯಾ ವಿರುದ್ಧ 223 ರನ್ ಬಾರಿಸುವ ಮೂಲಕ ರುತುರಾಜ್ ಗಾಯಕ್ವಾಡ್ ಈ ಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿದ್ದಾರೆ.

ಹೊಸ ಭರವಸೆ

ಟಿ20 ಕ್ರಿಕೆಟ್​ನಲ್ಲಿ ರುತುರಾಜ್ ಗಾಯಕ್ವಾಡ್ ಹೊಸ ಭರವಸೆ ಮೂಡಿಸಿದ್ದಾರೆ. ಭಾರತದ ಪರ ಇದುವರೆಗೆ ಆಡಿದ 19 ಪಂದ್ಯಗಳಿಂದ ಒಟ್ಟು 357 ರನ್ ಕಲೆಹಾಕಿದ್ದಾರೆ.

ಏಕದಿನದಲ್ಲೂ ಮಿಂಚಿಂಗ್

ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್​ನಲ್ಲಿ 4 ಪಂದ್ಯಗಳನ್ನಾಡಿರುವ ರುತುರಾಜ್ 1 ಅರ್ಧಶತಕದೊಂದಿಗೆ ಒಟ್ಟು 106 ರನ್​ ಗಳಿಸಿದ್ದಾರೆ.