16-11-2023

SA vs AUS ಸೆಮೀಸ್​ಗೆ ಭಾರೀ ಮಳೆ: ಪಂದ್ಯ ರದ್ದಾದರೆ ಫೈನಲ್​ಗೆ ಯಾವ ತಂಡ?

ಆಫ್ರಿಕಾ-ಆಸೀಸ್

ಐಸಿಸಿ ಏಕದಿನ ವಿಶ್ವಕಪ್ 2023ರ ಎರಡನೇ ಸೆಮಿಫೈನಲ್'ನಲ್ಲಿಂದು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಲಿವೆ.

ಪಂದ್ಯ ಎಲ್ಲಿ?

ಆಫ್ರಿಕಾ ಮತ್ತು ಆಸೀಸ್ ನಡುವಣ ಎರಡನೇ ಸೆಮಿಫೈನಲ್ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಯೋಜಿಸಲಾಗಿದೆ.

ಮಳೆ ಭೀತಿ

ದಿ ವೆದರ್ ಚಾನೆಲ್ ಪ್ರಕಾರ, ಗುರುವಾರ ಕೋಲ್ಕತ್ತಾದಲ್ಲಿ 50 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.

2 ಗಂಟೆಗೆ ಪಂದ್ಯ

ಪಂದ್ಯ 2 ಗಂಟೆಗೆ ಆರಂಭವಾಗಲಿದ್ದು, ಮಧ್ಯಾಹ್ನದ ಆರ್ದ್ರತೆಯು 77 ಪ್ರತಿಶತ ಇರಬಹುದು. ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್, ರಾತ್ರಿ ವೇಳೆ 23 ಡಿಗ್ರಿ ಸೆಲ್ಸಿಯಸ್‌ಗೆ ಕಡಿಮೆಯಾಗುತ್ತದೆ.

ಮೀಸಲು ದಿನ

ಪಂದ್ಯಕ್ಕೆ ಮೀಸಲು ದಿನ ನಿಗದಿಯಾಗಿದೆ. ಆದರೆ, ಶುಕ್ರವಾರ ಮಳೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ಸೂಚಿಸುತ್ತದೆ.

20 ಓವರ್

ಒಟ್ಟು ಎರಡು ದಿನಗಳಲ್ಲಿ ಪ್ರತಿ ತಂಡಕ್ಕೆ ಕನಿಷ್ಠ 20 ಓವರ್‌ ಪಂದ್ಯವನ್ನು ಪೂರ್ಣಗೊಳಿಸಬೇಕು ಎಂಬ ನಿಯಮವಿದೆ. ಆದರೆ, ಇದೂ ಸಾಧ್ಯವಾಗದಿದ್ದರೆ...

ಫೈನಲ್​ಗೆ ಯಾರು?

ಮೀಸಲು ದಿನ ಕೂಡ ಮಳೆ ಬಂದು ಪಂದ್ಯ ನಡೆಯದೆ ರದ್ದಾದರೆ, ಪಾಯಿಂಟ್ ಟೇಬಲ್'ನಲ್ಲಿ ಮುಂದಿರುವ ತಂಡ ಫೈನಲ್'ಗೆ ಪ್ರವೇಶ ಪಡೆಯುತ್ತದೆ. ಅಂದರೆ ಆಫ್ರಿಕಾ ಫೈನಲ್ ತಲುಪುತ್ತದೆ.

ಫೈನಲ್ ಯಾವಾಗ?

ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್ ಪಂದ್ಯವನ್ನು ನವೆಂಬರ್ 19 ರಂದು ಅಹ್ಮದಾಬಾದ್'ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.

ಪಟಾಕಿ ಸಿಡಿಸಲು ಧೋನಿ ಮನೆಗೆ ತೆರಳಿದ ರಿಷಭ್ ಪಂತ್