24-04-2024

Happy Birthday Sachin Tendulkar: ಐಪಿಎಲ್​ನಿಂದ ಕ್ರಿಕೆಟ್ ದೇವರು ಸಂಪಾದಿಸಿದೆಷ್ಟು?

Author: ಪೃಥ್ವಿ ಶಂಕರ

ಇಂದು ಕ್ರಿಕೆಟ್ ಲೋಕದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್ ಅವರ 51ನೇ ಜನ್ಮದಿನ.

24 ಏಪ್ರಿಲ್ 1973 ರಂದು ಜನಿಸಿದ ಸಚಿನ್ ತಮ್ಮ 15ನೇ ವಯಸ್ಸಿಗೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು, ತನ್ನ ಪ್ರತಿಭೆಯಿಂದ ಇಡೀ ಕ್ರಿಕೆಟ್ ಲೋಕವನ್ನೇ ಆಳಿದವರು.

ಶತಕಗಳ ಮೇಲೆ ಶತಕ ಸಿಡಿಸುತ್ತಾ ರನ್ ಶಿಖರ ಕಟ್ಟಿದ್ದ ಈ ಸವ್ಯಸಾಚಿಯನ್ನು ಕ್ರಿಕೆಟ್​ ದೇವರು ಎಂತಲೂ ಕರೆಯಲ್ಲಾಗುತ್ತದೆ.

ಇಂತಹ ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಾತ್ರವಲ್ಲದೆ ಐಪಿಎಲ್​ನಲ್ಲೂ ಬರೋಬ್ಬರಿ 6 ಆವೃತ್ತಿಗಳನ್ನು ಆಡಿದ್ದರು.

ಆಡಿದ 6 ಆವೃತ್ತಿಗಳನ್ನು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡಿದ್ದ ಸಚಿನ್ ತೆಂಡೂಲ್ಕರ್ ಈ ಮಿಲಿಯನ್ ಡಾಲರ್ ಟೂರ್ನಿಯಲ್ಲೂ ಸಾಕಷ್ಟು ಆದಾಯ ಗಳಿಸಿದ್ದರು.

2008 ರಿಂದ 2013 ರವರೆಗೆ ಮುಂಬೈ ಇಂಡಿಯನ್ಸ್‌ ಪರ ಆಡಿದ್ದ ಸಚಿನ್ ತೆಂಡೂಲ್ಕರ್ ಮೊದಲ 3 ಆವೃತ್ತಿಗಳಲ್ಲಿ ಪ್ರತಿ ಸೀಸನ್​ಗೆ 4.48 ಕೋಟಿ ರೂ.  ಸಂಭಾವನೆ ಪಡೆಯುತ್ತಿದ್ದರು.

ಆ ಸಮಯದಲ್ಲಿ ಇದು ಕೂಡ ಬೃಹತ್ ಮೊತ್ತವಾಗಿತ್ತು. ಈ ಮೂರು ಆವೃತ್ತಿಗಳಲ್ಲಿ ಸಚಿನ್ 13.44 ಕೋಟಿ ರೂ ಸಂಭಾವನೆ ಪಡೆದಿದ್ದರು.

2010 ರ ಹರಾಜಿಗೂ ಮುನ್ನ ಸಚಿನ್ ಅವರನ್ನು ತನ್ನಲ್ಲೇ ಉಳಿಸಿಕೊಂಡ ಮುಂಬೈ, ಅವರಿಗೆ ಪ್ರತಿ ಆವೃತ್ತಿಗೆ 8.2 ಕೋಟಿ ರೂ. ಸಂಭಾವನೆ ನೀಡಿತ್ತು.

ಬಳಿಕ 2013ರವರೆಗೆ ಮುಂಬೈ ಪರ ಆಡಿದ್ದ ಸಚಿನ್, ಆ ನಂತರ ಐಪಿಎಲ್​ಗೆ ವಿದಾಯ ಹೇಳಿದ್ದರು. ಒಟ್ಟಾರೆ ಸಚಿನ್, ಐಪಿಎಲ್​ನಿಂದ ಒಟ್ಟು 38.29 ಕೋಟಿ ರೂ. ಸಂಭಾವನೆ ಪಡೆದಿದ್ದರು.