16-02-2024

ಸರ್ಫರಾಜ್ ಖಾನ್ ಆದಾಯ ಎಷ್ಟು ಗೊತ್ತೇ?: ಕೇಳಿದ್ರೆ ಶಾಕ್ ಆಗ್ತೀರಾ

Author: Vinay Bhat

ಸರ್ಫರಾಜ್ ಪದಾರ್ಪಣೆ

ದೇಶೀಯ ಕ್ರಿಕೆಟ್‌ನಲ್ಲಿ ರನ್ ಮಳೆ ಸುರಿಸುತ್ತಿದ್ದ ಯುವ ಕ್ರಿಕೆಟಿಗ ಸರ್ಫರಾಜ್ ಖಾನ್ ಸುದೀರ್ಘ ಕಾಯುವಿಕೆಟಯ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದಾರೆ.

ಭಾರತ-ಇಂಗ್ಲೆಂಡ್

ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್​ನಲ್ಲಿ ಸರ್ಫರಾಜ್ ಚೊಚ್ಚಲ ಪಂದ್ಯದಲ್ಲಿ 62 ರನ್ ಗಳಿಸಿ ಮಿಂಚಿದರು.

ಸ್ಟಾರ್ ಪಟ್ಟ

ಟೀಮ್ ಇಂಡಿಯಾಕ್ಕೆ ಕಾಲಿಟ್ಟ ನಂತರ ಸರ್ಫರಾಜ್ ಅವರ ಸ್ಟಾರ್ ಮತ್ತಷ್ಟು ಏರುವ ನಿರೀಕ್ಷೆಯಿದೆ. ಅವರ ಗಳಿಕೆಯೂ ಗಮನಾರ್ಹವಾಗಿ ಹೆಚ್ಚಾಗುವುದು ಖಚಿತ.

ನಿವ್ವಳ ಮೌಲ್ಯ

ಸರ್ಫರಾಜ್ ಖಾನ್ ಅವರು ಟೀಮ್ ಇಂಡಿಯಾಕ್ಕೆ ಕಾಲಿಡುವ ಮುನ್ನವೇ ಮಿಲಿಯನೇರ್ ಎಂಬುದು ಅನೇಕರಿಗೆ ತಿಳಿದಿಲ್ಲ. ಅವರ ನಿವ್ವಳ ಮೌಲ್ಯವು 6-7 ಕೋಟಿ ರೂ. ಆಗಿದೆ.

ಐಪಿಎಲ್

ಸರ್ಫರಾಜ್ ಗಳಿಕೆಯ ಪ್ರಮುಖ ಭಾಗವು ಐಪಿಎಲ್‌ ಆಗಿದೆ. ಲ್ಲಿ ಅವರು 2015 ರಿಂದ 2023 ರವರೆಗೆ 5.65 ಕೋಟಿ ರೂಪಾಯಿಗಳನ್ನು ಸಂಬಳವಾಗಿ ಗಳಿಸಿದ್ದಾರೆ.

ಸಂಬಳ ಹೆಚ್ಚಳ

ಸರ್ಫರಾಜ್ ಮುಂಬೈ ಪರ ದೇಶೀಯ ಕ್ರಿಕೆಟ್ ಆಡುವ ಮೂಲಕವೂ ಸಾಕಷ್ಟು ಗಳಿಸುತ್ತಿದ್ದಾರೆ. ಅಲ್ಲದೆ ಇದೀಗ ಟೀಮ್ ಇಂಡಿಯಾದಲ್ಲಿ ಆಡುವ ಮೂಲಕ ಅವರ ಐಪಿಎಲ್ ಮೂಲ ಬೆಲೆ 20 ರಿಂದ 50 ಲಕ್ಷಕ್ಕೆ ಹೆಚ್ಚಾಗುತ್ತದೆ.

ಜಾಹೀರಾತು

ಸರ್ಫರಾಜ್ ತಮ್ಮ ಬ್ಯಾಟ್‌ ಮೇಲೆ ಸ್ಟಿಕ್ಕರ್ ಹಾಕಿದ್ದು, ಇದು ಪ್ರಸಿದ್ಧ ಕಂಪನಿ ಪೂಮಾದ ಜಾಹೀರಾತು ಆಗಿದೆ. ಕೊಹ್ಲಿ ಕೂಡ ಈ ಕಂಪನಿಯೊಂದಿಗೆ ಕೋಟಿಗಟ್ಟಲೆ ಒಪ್ಪಂದ ಮಾಡಿಕೊಂಡಿದ್ದಾರೆ.

ಮೂರನೇ ಟೆಸ್ಟ್

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಕುತೂಹಲ ಕೆರಳಿಸಿದೆ. ರೋಹಿತ್-ಜಡ್ಡು ಶತಕ, ಸರ್ಫರಾಜ್ ಅರ್ಧಶತಕದಿಂದ ಮೊದಲ ದಿನಕ್ಕೆ ಭಾರತ 326 ರನ್ ಗಳಿಸಿತ್ತು.