13-02-2024

ಸರ್ಫರಾಜ್ ಇನ್, ನಾಲ್ವರು ಔಟ್: 3ನೇ ಟೆಸ್ಟ್​ಗೆ ಭಾರತದ ಪ್ಲೇಯಿಂಗ್ XI

Author: Vinay Bhat

ರೋಹಿತ್ ಶರ್ಮಾ

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಓಪನರ್ ಆಗಿ ಆಡಲಿದ್ದಾರೆ. ರನ್ ಗಳಿಸಲು ಪರದಾಡುತ್ತಿರುವ ಇವರ ಮೇಲೆ ಸಾಕಷ್ಟು ಒತ್ತಡವಿದೆ.

ಯಶಸ್ವಿ ಜೈಸ್ವಾಲ್

ಜೈಸ್ವಾಲ್ ಎರಡನೇ ಟೆಸ್ಟ್‌ನಲ್ಲಿ ತಮ್ಮ ದ್ವಿಶತಕದ ಮೂಲಕ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಮೂರು ಪಂದ್ಯದಲ್ಲಿ ಕೂಡ ತಮ್ಮ ಫಾರ್ಮ್ ಅನ್ನು ಮುಂದುವರಿಸಲು ನೋಡುತ್ತಿದ್ದಾರೆ.

ಶುಭ್​ಮನ್ ಗಿಲ್

ಗಿಲ್ ಎರಡನೇ ಟೆಸ್ಟ್​ನಲ್ಲಿ ಶತಕ ಸಿಡಿಸಿ ಟೀಕೆ ಮಾಡುವವರ ಬಾಯಿ ಮುಚ್ಚಿಸಿದ್ದರು. ಇದೀಗ ಮೂರನೇ ಟೆಸ್ಟ್​ನಲ್ಲಿ ಇವರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

ಸರ್ಫರಾಜ್ ಖಾನ್

ರಾಹುಲ್ ಗಾಯಗೊಂಡು, ಅಯ್ಯರ್ ಅವರನ್ನು ಕೈಬಿಡುವುದರೊಂದಿಗೆ ಸರ್ಫರಾಜ್ ಖಾನ್ ಅವರು ಮೂರನೇ ಟೆಸ್ಟ್‌ನಲ್ಲಿ ಭಾರತಕ್ಕೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ.

ರಜತ್ ಪಾಟಿದಾರ್

ರಜತ್ ಪಾಟಿದಾರ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಸರ್ಫಾರಾಜ್ ಖಾನ್ ಬೆಂಚ್ ಕಾಯುವುದು ಮುಂದುವರೆಯಲಿದೆ. ರಜತ್ ನಂ.5ರಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.

ಧ್ರುವ್ ಜುರೆಲ್

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಧ್ರುವ್ ಜುರೆಲ್ ಪದಾರ್ಪಣೆ ಮಾಡಲಿದ್ದು, ಕಳಪೆ ಪ್ರದರ್ಶನ ತೋರುತ್ತಿರುವ ಕೆಎಸ್ ಭರತ್ ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ.

ರವೀಂದ್ರ ಜಡೇಜಾ

ಗಾಯದ ಸಮಸ್ಯೆಯಿಂದಾಗಿ ಎರಡನೇ ಪಂದ್ಯದಿಂದ ಹೊರಗುಳಿದ ನಂತರ ರವೀಂದ್ರ ಜಡೇಜಾ ಕೊನೆಯ ಮೂರು ಟೆಸ್ಟ್‌ಗಳಿಗೆ ಭಾರತ ತಂಡಕ್ಕೆ ಮರಳಿದ್ದಾರೆ.

ರವಿಚಂದ್ರನ್ ಅಶ್ವಿನ್

ರಚಂದ್ರನ್ ಅಶ್ವಿನ್ ತಮ್ಮ 500ನೇ ಟೆಸ್ಟ್ ವಿಕೆಟ್‌ ಹುಡುಕಾಟದಲ್ಲಿದ್ದಾರೆ. ಇದು ಮೂರನೇ ಟೆಸ್ಟ್ ಪಂದ್ಯದಲ್ಲಿ ಆಗುವುದು ಖಚಿತ.

ಅಕ್ಷರ್ ಪಟೇಲ್

ಅಕ್ಷರ್ ಪಟೇಲ್ ಭಾರತಕ್ಕೆ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರಮುಖರಾಗಿದ್ದಾರೆ. 3ನೇ ಟೆಸ್ಟ್​ನಲ್ಲಿ ಇವರು ಸ್ಥಾನ ಪಡೆಯಬಹುದು.

ಜಸ್ಪ್ರೀತ್ ಬುಮ್ರಾ

ಜಸ್ಪ್ರೀತ್ ಬುಮ್ರಾ ಅವರು 15 ವಿಕೆಟ್‌ಗಳೊಂದಿಗೆ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯ ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ.

ಮೊಹಮ್ಮದ್ ಸಿರಾಜ್

ಮೊಹಮ್ಮದ್ ಸಿರಾಜ್ ಎರಡನೇ ಟೆಸ್ಟ್‌ನಿಂದ ವಿಶ್ರಾಂತಿ ಪಡೆದ ನಂತರ ಮೂರನೇ ಟೆಸ್ಟ್ ಮೂಲಕ ಆಡುವ XI ಗೆ ಮರಳುವ ಸಾಧ್ಯತೆ ಇದೆ.