ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಪಾಕ್ ನೆಲದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಇಡೀ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದೆ.
Pic credit: Google
ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶವು ಪಾಕಿಸ್ತಾನವನ್ನು 10 ವಿಕೆಟ್‌ಗಳಿಂದ ಸೋಲಿಸಿ ತನ್ನ ಮೊದಲ ಟೆಸ್ಟ್ ಗೆಲುವು ಸಾಧಿಸಿತು.
Pic credit: Google
ಬಾಂಗ್ಲಾದೇಶದ ಈ ಗೆಲುವಿನಲ್ಲಿ ಹಲವು ಆಟಗಾರರು ಪಾತ್ರವಹಿಸಿದ್ದರು. ಅವರಲ್ಲಿ ತಂಡದ ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಕೂಡ ಒಬ್ಬರು.
Pic credit: Google
ಶಕೀಬ್ ಐದನೇ ದಿನದಂದು ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗಳನ್ನು ಪಡೆಯುವ ಮೂಲಕ ಪಾಕಿಸ್ತಾನವನ್ನು ಕೇವಲ 146 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.
Pic credit: Google
ಇದರೊಂದಿಗೆ ಶಕೀಬ್ ತಮ್ಮ ಹೆಸರಿನಲ್ಲಿ ವಿಶ್ವದಾಖಲೆಯನ್ನೂ ಮಾಡಿದ್ದು, ಈಗ ಎಲ್ಲಾ ಮೂರು ಮಾದರಿಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎಡಗೈ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.
Pic credit: Google
ಎಲ್ಲಾ ಮೂರು ಸ್ವರೂಪಗಳಲ್ಲಿ 444 ಪಂದ್ಯಗಳನ್ನು ಆಡಿರುವ ಶಕೀಬ್ ಅವರ ಹೆಸರಿನಲ್ಲಿ ಈಗ 707 ವಿಕೆಟ್‌ಗಳಿವೆ. ಅದರಲ್ಲಿ 241 ಟೆಸ್ಟ್, 317 ಏಕದಿನ ಮತ್ತು 149 ಟಿ20 ವಿಕೆಟ್ಗಳು ಸೇರಿವೆ.
Pic credit: Google
ಶಕೀಬ್‌ಗಿಂತ ಮೊದಲು, ಈ ದಾಖಲೆಯು ನ್ಯೂಜಿಲೆಂಡ್‌ನ ಮಾಜಿ ನಾಯಕ ಮತ್ತು ಅನುಭವಿ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ ಹೆಸರಿನಲ್ಲಿತ್ತು. ಅವರು 442 ಪಂದ್ಯಗಳಲ್ಲಿ 705 ವಿಕೆಟ್‌ಗಳನ್ನು ಪಡೆದಿದ್ದರು.