ಒಂದೇ ಪಂದ್ಯದಲ್ಲಿ 6 ಅದ್ಭುತಗಳನ್ನು ಮಾಡಿದ ಇಶಾನ್ ಕಿಶನ್

18  August 2024

Pic credit: Google

ಪೃಥ್ವಿ ಶಂಕರ

Pic credit: Google

ಟೀಂ ಇಂಡಿಯಾವನ್ನು ಸೇರಿಕೊಳ್ಳುವ ಸಲುವಾಗಿ ದೇಶೀ ಕ್ರಿಕೆಟ್ ಬುಚ್ಚಿ ಬಾಬು ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ಇಶಾನ್ ಕಿಶನ್ ತಾವು ಆಡಿದ ಮೊದಲ ಪಂದ್ಯದಲ್ಲೇ 6 ಅದ್ಭುತ ಅದ್ಭುತಗಳನ್ನು ಮಾಡಿದ್ದಾರೆ.

Pic credit: Google

ಜಾರ್ಖಂಡ್‌ ತಂಡದ ನಾಯಕತ್ವವಹಿಸಿ ಕಣಕ್ಕಿಳಿದಿದ್ದ ಇಶಾನ್ ಕಿಶನ್, ಮಧ್ಯಪ್ರದೇಶ ವಿರುದ್ಧದ ಈ ಪಂದ್ಯದಲ್ಲಿ ಸಿಕ್ಸರ್‌ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

Pic credit: Google

ಇದಲ್ಲದೆ ಇಶಾನ್ ಕಿಶನ್ ಮೊದಲ ಇನ್ನಿಂಗ್ಸ್‌ನಲ್ಲಿ ಸಿಕ್ಸರ್‌ನೊಂದಿಗೆ ಶತಕ ಪೂರೈಸುವ ಮೂಲಕ ಮತ್ತೊಂದು ಮ್ಯಾಜಿಕ್ ಮಾಡಿದರು.

Pic credit: Google

ಹಾಗೆಯೇ ಮಧ್ಯಪ್ರದೇಶ ವಿರುದ್ಧದ ಈ ಪಂದ್ಯದಲ್ಲಿ 155 ರನ್​ಗಳ ಅತ್ಯಧಿಕ ರನ್ ಕಲೆಹಾಕಿದ ಕಿಶನ್, ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

Pic credit: Google

ಈ ಪಂದ್ಯದಲ್ಲಿ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್‌ನಲ್ಲೂ ಮಿಂಚಿದ ಕಿಶನ್ 5 ಕ್ಯಾಚ್ ಮತ್ತು 1 ಸ್ಟಂಪಿಂಗ್ ಮಾಡಿದರು.

Pic credit: Google

ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್​ ಜೊತೆಗೆ ಕಿಶನ್ ಜಾರ್ಖಂಡ್ ತಂಡದ ನಾಯಕರಾಗಿಯೂ ಮೈದಾನದಲ್ಲಿ ತಮ್ಮ ಚಾಣಾಕ್ಷತನ ನಡೆಯಿಂದ ಎಲ್ಲರ ಗಮನ ಸೆಳೆದರು.

Pic credit: Google

ಇದೆಲ್ಲದರ ಜೊತೆಗೆ ಬುಚ್ಚಿ ಬಾಬು ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಇಶಾನ್ ಕಿಶನ್, ಬಾಂಗ್ಲಾದೇಶ ವಿರುದ್ಧದ ಸರಣಿಗೆ ತನ್ನ ಆಯ್ಕೆಯನ್ನು ಖಚಿತಪಡಿಸಿಕೊಳ್ಳುವ ಕೆಲಸವನ್ನೂ ಮಾಡಿದರು.