13-10-2023

ಶುಭ್​ಮನ್ ಗಿಲ್​ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಗಿಲ್'ಗೆ ಪ್ರಶಸ್ತಿ

ಭಾರತದ ಸ್ಟಾರ್ ಓಪನರ್ ಶಭ್'ಮನ್ ಗಿಲ್ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ನಡುವೆ ಸೆಪ್ಟೆಂಬರ್ 2023 ರ ICC ಪುರುಷರ ತಿಂಗಳ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ.

ಶುಭಸುದ್ದಿ

2023 ರ ಏಕದಿನ ವಿಶ್ವಕಪ್‌ನಲ್ಲಿ ಭಾರತ-ಪಾಕ್ ಪಂದ್ಯಕ್ಕೆ ಮುಂಚಿತವಾಗಿ ಗಿಲ್‌ಗೆ ಪ್ರಶಸ್ತಿ ನೀಡಿರುವುದು ಭಾರತಕ್ಕೆ ಶುಭ ಸೂಚನೆಯಾಗಿದೆ.

80ಸರಾಸರಿ

ಸೆಪ್ಟೆಂಬರ್‌ನಲ್ಲಿ 80 ಸರಾಸರಿಯಲ್ಲಿ 480 ಏಕದಿನ ರನ್‌ಗಳನ್ನು ಗಳಿಸಿದ್ದಕ್ಕಾಗಿ ಗಿಲ್ ಅವರಿಗೆ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿ ಸಿಕ್ಕಿದೆ.

ಸಿರಾಜ್ ಔಟ್

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಹೆಸರಿನಲ್ಲಿ ಭಾರತದ ಮೊಹಮ್ಮದ್ ಸಿರಾಜ್, ಇಂಗ್ಲೆಂಡ್‌ ಆರಂಭಿಕ ಡೇವಿಡ್ ಮಲಾನ್ ಕೂಡ ಇದ್ದರು.

ಏಷ್ಯಾಕಪ್​ನಲ್ಲಿ ಗಿಲ್

2023 ರ ಏಷ್ಯಾಕಪ್‌ನಲ್ಲಿ ಗಿಲ್ ಬಾಂಗ್ಲಾದೇಶದ ವಿರುದ್ಧ 121 ರನ್ ಚಚ್ಚಿದ್ದರು. ಬಳಿಕ ಆಸ್ಟ್ರೇಲಿಯಾ ವಿರುದ್ಧ 104 ರನ್ ಬಾರಿಸಿ ಮಿಂಚಿದ್ದರು.

ಗಿಲ್ ದಾಖಲೆ

ಗಿಲ್ ಏಕದಿನದಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. 35 ಪಂದ್ಯಗಳಲ್ಲಿ 66.1 ರ ಸರಾಸರಿಯಲ್ಲಿ 1917 ರನ್, 102.84 ರ ಸ್ಟ್ರೈಕ್ ರೇಟ್ ಮೂಲಕ ODI ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಅನಾರೋಗ್ಯ

ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಗಿಲ್ ಐಸಿಸಿ ಏಕದಿನ ವಿಶ್ವಕಪ್​ನ ಮೊದಲ ಎರಡು ಪಂದ್ಯಕ್ಕೆ ಅಲಭ್ಯರಾಗಿದ್ದರು.

ಪಾಕ್ ವಿರುದ್ಧ ಕಣಕ್ಕೆ?

ವಿಶ್ವಕಪ್​ನಲ್ಲಿ ಅ. 14 ರಂದು ಭಾರತ-ಪಾಕ್ ಮುಖಾಮುಖಿ ಆಗಲಿದೆ. ಈ ಪಂದ್ಯದಲ್ಲಿ ಗಿಲ್ ಆಡುತ್ತಾರ ಎಂಬುದು ನೋಡಬೇಕಿದೆ.

ಭಾರತ-ಪಾಕ್ ಪಂದ್ಯಕ್ಕೂ ಮುನ್ನ ಸಂಗೀತ ಸಮಾರಂಭ