ಶುಭ್‌ಮನ್ ಗಿಲ್​ಗೆ ಕೋಟಿ ಕೋಟಿ ಹಣ ಎಲ್ಲಿಂದ ಬರುತ್ತೆ ಗೊತ್ತೇ?

04-12-2023

ಶುಭ್‌ಮನ್ ಗಿಲ್​ಗೆ ಕೋಟಿ ಕೋಟಿ ಹಣ ಎಲ್ಲಿಂದ ಬರುತ್ತೆ ಗೊತ್ತೇ?

Author: Vinay Bhat

TV9 Kannada Logo For Webstory First Slide
ಭಾರತೀಯ ಕ್ರಿಕೆಟ್‌ನಲ್ಲಿ ಸಾಮಾನ್ಯ ಆಟಗಾರನಂತೆ ಸ್ಥಾನ ಪಡೆದುಕೊಂಡ ಶುಭ್‌ಮನ್ ಗಿಲ್ ಇಂದು ದೊಡ್ಡ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

ಶುಭ್‌ಮನ್ ಗಿಲ್

ಭಾರತೀಯ ಕ್ರಿಕೆಟ್‌ನಲ್ಲಿ ಸಾಮಾನ್ಯ ಆಟಗಾರನಂತೆ ಸ್ಥಾನ ಪಡೆದುಕೊಂಡ ಶುಭ್‌ಮನ್ ಗಿಲ್ ಇಂದು ದೊಡ್ಡ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಶುಭ್‌ಮನ್ ಗಿಲ್ ಕಾಲಿಟ್ಟು ಕೇವಲ 4 ವರ್ಷಗಳು ಆಗಿವೆಯಷ್ಟೆ. ಆದರೆ ಅವರ ಸಂಪತ್ತು ಕೋಟಿಗಳ ಲೆಕ್ಕದಲ್ಲಿದೆ.

ಕೋಟಿಗಳ ಒಡೆಯ

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಶುಭ್‌ಮನ್ ಗಿಲ್ ಕಾಲಿಟ್ಟು ಕೇವಲ 4 ವರ್ಷಗಳು ಆಗಿವೆಯಷ್ಟೆ. ಆದರೆ ಅವರ ಸಂಪತ್ತು ಕೋಟಿಗಳ ಲೆಕ್ಕದಲ್ಲಿದೆ.

ವರದಿಯೊಂದರ ಪ್ರಕಾರ, ಶುಭ್‌ಮನ್ ಗಿಲ್ ಅವರ ನಿವ್ವಳ ಮೌಲ್ಯವು ಪ್ರಸ್ತುತ 32 ಕೋಟಿ ರೂ. ಆಗಿದೆ. ಹಾಗಾದರೆ ಕೋಟಿಗಟ್ಟಲೆ ಹಣ ಎಲ್ಲಿಂದ ಬರುತ್ತದೆ?.

32 ಕೋಟಿ ರೂ.

ವರದಿಯೊಂದರ ಪ್ರಕಾರ, ಶುಭ್‌ಮನ್ ಗಿಲ್ ಅವರ ನಿವ್ವಳ ಮೌಲ್ಯವು ಪ್ರಸ್ತುತ 32 ಕೋಟಿ ರೂ. ಆಗಿದೆ. ಹಾಗಾದರೆ ಕೋಟಿಗಟ್ಟಲೆ ಹಣ ಎಲ್ಲಿಂದ ಬರುತ್ತದೆ?.

14 ಕಂಪನಿ

ಶುಭ್‌ಮನ್ ಗಿಲ್'ಗೆ ಹಲವು ಆದಾಯದ ಮೂಲಗಳಿವೆ. ಇದರ ದೊಡ್ಡ ಮೂಲವೆಂದರೆ 14 ಜಾಹೀರಾತು ಕಂಪನಿಗಳು. ಇಲ್ಲಿಂದಲೇ ಕೋಟಿ ಕೋಟಿ ಗಳಿಸುತ್ತಾರೆ.

ಕ್ರಿಕೆಟ್‌ನಿಂದ ಎಷ್ಟು?

ಶುಭ್‌ಮನ್ ಗಿಲ್ 14 ಕಂಪನಿಗಳ ಪೋಸ್ಟರ್ ಬಾಯ್ ಅಲ್ಲದೆ, ಕ್ರಿಕೆಟ್‌ನಿಂದ ಕೂಡ 5 ಆದಾಯದ ಮೂಲಗಳನ್ನು ಹೊಂದಿದ್ದಾರೆ.

3 ಕೋಟಿ ರೂ.

ಬಿಸಿಸಿಐ ವಾರ್ಷಿಕ ಒಪ್ಪಂದದಲ್ಲಿ ಗ್ರೇಡ್ ಬಿ ಕ್ರಿಕೆಟಿಗರಾಗಿರುವ ಗಿಲ್, ಇಲ್ಲಿಂದ 3 ಕೋಟಿ ರೂ. ಹಾಗೂ ಲೀಗ್ ಕ್ರಿಕೆಟ್ ನಿಂದ 8 ಕೋಟಿ ರೂ. ಪಡೆಯುತ್ತಾರೆ.

ಟಿ20I-ODI-ಟೆಸ್ಟ್

ಶುಭ್‌ಮನ್ ಗಿಲ್ ಅವರು ಅಂತರರಾಷ್ಟ್ರೀಯ ಟಿ20ಐ, ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 3 ಲಕ್ಷ, 15 ಲಕ್ಷ ಮತ್ತು 6 ಲಕ್ಷ ರೂ. ಪಡೆಯುತ್ತಾರೆ.

ದುಬಾರಿ ಕಾರು

ಗಿಲ್ ಬಳಿ ಮಹೀಂದ್ರ ಥಾರ್, ರೇಂಜ್ ರೋವರ್‌ನಂತಹ ಐಷಾರಾಮಿ ಕಾರುಗಳಿವೆ. ಇದರ ಬೆಲೆ 1 ರಿಂದ 1.5 ಕೋಟಿ ರೂ., ಜೊತೆಗೆ ಪಂಜಾಬ್‌ನ ಫಿರೋಜ್‌ಪುರದಲ್ಲಿ ಮನೆ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಆಸ್ತಿ ಹೊಂದಿದ್ದಾರೆ.