IND vs SA ಮೊದಲ ಏಕದಿನಕ್ಕೆ ವರುಣನ ಅಡ್ಡಿ: ಎಷ್ಟು ಗಂಟೆಗೆ ಮಳೆ ಬರಲಿದೆ?

16-December-2023

Author: Vinay Bhat

ಭಾರತ-ದಕ್ಷಿಣ ಆಫ್ರಿಕಾ ನಡುವೆ ಭಾನುವಾರದಂದು ಮೊದಲ ಏಕದಿನ ಪಂದ್ಯ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ-ಆಫ್ರಿಕಾ

ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಕೆಟ್ಟ ಸುದ್ದಿ ಇದೆ. ಜೋಹಾನ್ಸ್‌ಬರ್ಗ್‌ನಲ್ಲಿ ಮುಂದಿನ ಕೆಲವು ದಿನ ಮಳೆಯಾಗಲಿದೆ. ಪಂದ್ಯದ ದಿನವೂ ಮಳೆಯಾಗುವ ಸಾಧ್ಯತೆಯಿದೆ.

ಮಳೆ ಸಾಧ್ಯತೆ

ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1 ಗಂಟೆಗೆ ಟಾಸ್ ನಡೆಯಲಿದ್ದು, ಈ ಸಮಯದಲ್ಲಿ ಶೇ.15ರಷ್ಟು ಮಳೆ ಸಾಧ್ಯತೆ ಇದೆ. ದಿನವಿಡೀ ಮೋಡ ಕವಿದ ವಾತಾವರಣ ಇರುತ್ತದೆ.

ಎಷ್ಟು ಗಂಟೆಗೆ?

ಪಂದ್ಯದ ಮಧ್ಯದಲ್ಲಿ ಮಳೆ ಬಂದರೆ ಓವರ್‌ ಕಡಿತಗೊಳಿಸಬಹುದು. ಡಕ್ವರ್ತ್-ಲೂಯಿಸ್ ನಿಯಮ ಗಮನದಲ್ಲಿಟ್ಟುಕೊಂಡು ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಬಹುದು.

ಡಕ್ವರ್ತ್-ಲೂಯಿಸ್

ಈ ಪಿಚ್ ಬ್ಯಾಟ್ಸ್‌ಮನ್‌ಗಳು ಸಹಾಯ ಮಾಡುತ್ತದೆ. ಇಲ್ಲಿ ವೇಗದ ಬೌಲರ್‌ಗಳಿಗಿಂತ ಸ್ಪಿನ್ ಬೌಲರ್‌ಗಳು ಯಶಸ್ಸು ಸಾಧಿಸುತ್ತಾರೆ.

ಪಿಚ್ ಹೇಗಿದೆ?

ಮೊದಲು ಬ್ಯಾಟಿಂಗ್ ಮಾಡುವಾಗ 350 ರನ್ ಗಳಿಸಿದರೆ ಉತ್ತಮ. ಇದಕ್ಕಿಂತ ಕಡಿಮೆ ಮೊತ್ತವನ್ನು ರಕ್ಷಿಸಲು ಕಷ್ಟ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುವುದರಿಂದ ಹೈ-ಸ್ಕೋರ್ ಪಂದ್ಯ ಆಗಬಹುದು.

350 ರನ್

ಈ ಮೈದಾನದಲ್ಲಿ ಅತಿ ಹೆಚ್ಚು ODI ಸ್ಕೋರ್ 439 ಆಗಿದೆ. ಇದನ್ನು 2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಕಲೆಹಾಕಿತ್ತು.

ಗರಿಷ್ಠ ಸ್ಕೋರ್