14-06-2024

ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ವೇಗದ ಚೆಂಡು ಎಸೆದಿರುವ ವೇಗಿ ಯಾರು ಗೊತ್ತಾ?

9ನೇ ಆವೃತ್ತಿಯ ಟಿ20 ವಿಶ್ವಕಪ್ ಇದೀಗ ಲೀಗ್ ಹಂತ ಮುಗಿಯುವ ಸನಿಹದಲ್ಲಿದೆ. ಇದುರೊಂದಿಗೆ ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯುವ ತಂಡಗಳ ಬಗ್ಗೆ ಖಚಿತತೆ ಸಿಕ್ಕಿದೆ.

ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಇದುವರೆಗೆ ಬ್ಯಾಟರ್​ಗಳಿಗಿಂತ ಬೌಲರ್​ಗಳು ಹೆಚ್ಚು ಮೇಲುಗೈ ಸಾಧಿಸಿದ್ದಾರೆ. ನಡೆದಿರುವ 25ಕ್ಕೂ ಅಧಿಕ ಪಂದ್ಯದಲ್ಲಿ ಕೆಲವು ಪಂದ್ಯಗಳಲ್ಲಿ ಮಾತ್ರ ಬ್ಯಾಟರ್ಸ್​ಗಳು ಅಬ್ಬರಿಸಿದ್ದಾರೆ.

ಉಳಿದಂತೆ ಎಲ್ಲಾ ಪಂದ್ಯಗಳಲ್ಲೂ ಬೌಲರ್​ಗಳ ಪರಾಕ್ರಮವೇ ಹೆಚ್ಚು ಕಂಡುಬಂದಿದೆ. ಹೀಗಾಗಿ ಈ ಲೀಗ್​ನಲ್ಲಿ ಇದುವರೆಗೆ ನಡೆದಿರುವ ಪಂದ್ಯಗಳಲ್ಲಿ ಯಾವ ವೇಗಿ ಅತ್ಯಂತ ವೇಗದ ಎಸೆತವನ್ನು ಎಸೆದಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

2024 ರ ಟಿ20 ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಅತಿ ವೇಗದ ಬಾಲ್ ಬೌಲ್ ಮಾಡಿದ ಬೌಲರ್ ಇಂಗ್ಲೆಂಡ್‌ನ ಮಾರ್ಕ್ ವುಡ್ ಆಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಮಾರ್ಕ್​ವುಡ್, ಈ ಟಿ20 ವಿಶ್ವಕಪ್‌ನ ವೇಗದ ಚೆಂಡನ್ನು ಬೌಲ್ ಮಾಡಿದ್ದು, ಅದರ ವೇಗವು 153.25 KM/H ಆಗಿತ್ತು.

ಈ ವಿಚಾರದಲ್ಲಿ ಇದೀಗ ಮಾರ್ಕ್ ವುಡ್ ಲಂಕಾ ತಂಡದ ವೇಗದ ಬೌಲರ್ ಮತಿಶಾ ಪತಿರಾನ ಅವರನ್ನು ಹಿಂದಿಕ್ಕಿದ್ದಾರೆ.

ಮತಿಶಾ ಪತಿರಾನ ಎಸೆದ ಅತಿ ವೇಗದ ಚೆಂಡಿನ ವೇಗ 152.58 KPH ಆಗಿತ್ತು.

ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಎನ್ರಿಕ್ ನೋಕಿಯಾ ಮೂರನೇ 152.54 KPH ವೇಗದಲ್ಲಿ ಚೆಂಡನ್ನು ಬೌಲ್ ಮಾಡಿದ್ದಾರೆ.

ಮಾರ್ಕ್ ವುಡ್ ಈ ಹಿಂದೆ 2024 ರ ಟಿ20 ವಿಶ್ವಕಪ್‌ನಲ್ಲಿ 151.63 KPH ವೇಗದಲ್ಲಿ ಅತ್ಯಂತ ವೇಗದ ಚೆಂಡನ್ನು ಬೌಲ್ ಮಾಡಿದ್ದರು.

ಒಮನ್ ವಿರುದ್ಧ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮಾರ್ಕ್ ವುಡ್ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.