16-06-2024

T20 World Cup 2024: ಪಾಕ್ ಆಟಗಾರರು ಕಳೆದುಕೊಂಡಿದ್ದು ಎಷ್ಟು ಕೋಟಿ ಗೊತ್ತಾ?

ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ತಂಡ ಲೀಗ್ ಹಂತದಲ್ಲೇ ಹೊರಬಿದ್ದಿದೆ. ಆದಾಗ್ಯೂ ಪಾಕ್ ತಂಡ ಇಂದು ತನ್ನ ಲೀಗ್ ಪಂದ್ಯವನ್ನು ಆಡುತ್ತಿದೆ.

ಲೀಗ್ ಸುತ್ತಿನ ಮೊದಲೆರಡು ಪಂದ್ಯಗಳಲ್ಲಿ ಅಂದರೆ, ಅಮೆರಿಕ ಮತ್ತು ಭಾರತ ವಿರುದ್ಧ ಸೋತಿದ್ದು, ಪಾಕ್ ತಂಡವನ್ನು ಲೀಗ್​ನಿಂದ ಹೊರಹಾಕಿತು.

ಈ ಸೋಲಿನ ಹೊಣೆ ಇದೀಗ ಪಾಕ್ ಆಟಗಾರರ ಮೇಲೆ ಬೀಳಲಿದೆ. ವರದಿಗಳ ಪ್ರಕಾರ, ನಾಯಕ ಬಾಬರ್ ಸೇರಿದಂತೆ ಎಲ್ಲಾ ಆಟಗಾರರ ಸಂಬಳ ಕಡಿತವಾಗಬಹುದು.

ವರದಿಗಳ ಪ್ರಕಾರ, ಕೆಲವು ಪಿಸಿಬಿ ಅಧಿಕಾರಿಗಳು ಮತ್ತು ಮಾಜಿ ಆಟಗಾರರು ಕೇಂದ್ರ ಒಪ್ಪಂದವನ್ನು ಮರುಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ.

ಪಾಕ್ ಮಂಡಳಿ ಬಾಬರ್ ಆಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರಂತಹ ಅಗ್ರ ಆಟಗಾರರಿಗೆ ಪ್ರತಿ ವರ್ಷ 1.5 ಕೋಟಿ ರೂಪಾಯಿಗಳನ್ನು ನೀಡುತ್ತದೆ. ಈಗ ಅದನ್ನು ಕಡಿಮೆ ಮಾಡಬಹುದು.

ಅಂದಹಾಗೆ, ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಮೂಲಕ ಪಾಕಿಸ್ತಾನ ತಂಡದ ಆಟಗಾರರು 2.70 ಕೋಟಿ ಪಾಕಿಸ್ತಾನಿ ರೂಪಾಯಿ ಗೆಲ್ಲುವ ಅವಕಾಶವನ್ನೂ ಕಳೆದುಕೊಂಡಿದ್ದಾರೆ.

ಟಿ20 ವಿಶ್ವಕಪ್ ಗೆದ್ದರೆ ಪ್ರತಿ ಆಟಗಾರನಿಗೆ 2.70 ಕೋಟಿ ಪಾಕಿಸ್ತಾನಿ ರೂಪಾಯಿ ನೀಡಲಾಗುವುದು ಎಂದು ಪಿಸಿಬಿ ಮುಖ್ಯಸ್ಥರು ಹೇಳಿದ್ದರು. ಆದರೆ ತಂಡವು ಮೊದಲ ಸುತ್ತಿನಲ್ಲಿಯೇ ಹೊರಗುಳಿಯಿತು.

ಟಿ20 ವಿಶ್ವಕಪ್ ಬಳಿಕ ಪಾಕಿಸ್ತಾನ ತಂಡದಿಂದ 5 ರಿಂದ 6 ಆಟಗಾರರನ್ನು ಕೈಬಿಡಬಹುದು ಎಂದು ಹೇಳಲಾಗುತ್ತಿದೆ.