15-06-2024

T20 World Cup: ಅತಿ ಕಡಿಮೆ ಎಸೆತಗಳಲ್ಲಿ ಪಂದ್ಯ ಗೆದ್ದ 5 ತಂಡಗಳಿವು

T20 ವಿಶ್ವಕಪ್ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಗುರಿ ಬೆನ್ನಟ್ಟಿದ ಐದು ತಂಡಗಳ ವಿವರ ಈ ಕೆಳಗಿನಂತಿದೆ.

2024 ರ ಟಿ20 ವಿಶ್ವಕಪ್‌ನಲ್ಲಿ ಒಮನ್ ನೀಡಿದ್ದ 48 ರನ್‌ಗಳ ಗುರಿಯನ್ನು ಇಂಗ್ಲೆಂಡ್ 3.1 ಓವರ್‌ಗಳಲ್ಲಿ ಸಾಧಿಸಿತ್ತು.

ಇದರೊಂದಿಗೆ ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ಬಾಲ್‌ಗಳ ವಿಚಾರದಲ್ಲಿ ಅತಿ ದೊಡ್ಡ ಗೆಲುವು ಸಾಧಿಸಿದ ತಂಡ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಯಿತು.

ಶ್ರೀಲಂಕಾ 2014 ರ ಟಿ20 ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ 90 ಎಸೆತಗಳು ಬಾಕಿ ಇರುವಂತೆಯೇ ಗೆದ್ದಿತ್ತು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಚೆಂಡುಗಳ ವಿಷಯದಲ್ಲಿ ಎರಡನೇ ಅತಿ ದೊಡ್ಡ ಗೆಲುವಾಗಿದೆ.

ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ನಮೀಬಿಯಾ ವಿರುದ್ಧ ಆಸ್ಟ್ರೇಲಿಯ ಇನ್ನೂ 86 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತ್ತು.

2021 ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವನ್ನು ಆಸ್ಟ್ರೇಲಿಯಾ 86 ಎಸೆತಗಳು ಬಾಕಿ ಇರುವಂತೆಯೇ ಸೋಲಿಸಿತ್ತು.

2021 ರ ಟಿ20 ವಿಶ್ವಕಪ್‌ನಲ್ಲಿ ಭಾರತ, ಸ್ಕಾಟ್ಲೆಂಡ್‌ ತಂಡವನ್ನು ಇನ್ನೂ 81 ಎಸೆತಗಳು ಬಾಕಿ ಇರುವಂತೆಯೇ ಮಣಿಸಿತ್ತು. ಇದು ಚೆಂಡುಗಳ ವಿಷಯದಲ್ಲಿ ಟಿ20 ವಿಶ್ವಕಪ್‌ನಲ್ಲಿ ಐದನೇ ಅತಿ ದೊಡ್ಡ ಗೆಲುವಾಗಿದೆ.