15-06-2024

ಟಿ20 ವಿಶ್ವಕಪ್‌ನಲ್ಲಿ ಒಂದು ರನ್‌ನಿಂದ ಗೆದ್ದ ತಂಡಗಳು ಯಾವ್ಯಾವು ಗೊತ್ತಾ?

2024 ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ, ನೇಪಾಳ ತಂಡವನ್ನು 1 ರನ್​ಗಳಿಂದ ಮಣಿಸಿದೆ.

ಜೂನ್ 14 ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 115 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ನೇಪಾಳ ತಂಡ114 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ 1 ರನ್​​ಗಳಿಂದ ಸೋತಿತು.

ಟಿ20 ವಿಶ್ವಕಪ್‌ನಲ್ಲಿ ತಂಡವೊಂದು ಒಂದು ರನ್‌ನಿಂದ ಗೆದ್ದಿರುವುದು ಇದೇ ಮೊದಲಲ್ಲ.ಈ ಹಿಂದೆ ಐದು ತಂಡಗಳು 1 ರನ್​​ಗಳಿಂದ ಸೋತಿವೆ.

2009ರಲ್ಲಿ ಲಾರ್ಡ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ದಕ್ಷಿಣ ಆಫ್ರಿಕಾ 1 ರನ್‌ನಿಂದ ಸೋಲಿಸಿತ್ತು.

2010ರಲ್ಲಿ ಬಾರ್ಬಡೋಸ್‌ನಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನವನ್ನು 1 ರನ್‌ನಿಂದ ಸೋಲಿಸಿತ್ತು.

2012ರಲ್ಲಿ ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಭಾರತ 1 ರನ್‌ನಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು.

2016ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಭಾರತ 1 ರನ್‌ನಿಂದ ಬಾಂಗ್ಲಾದೇಶವನ್ನು ಸೋಲಿಸಿತ್ತು.

2022 ರಲ್ಲಿ ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆ, ಪಾಕಿಸ್ತಾನವನ್ನು 1 ರನ್‌ನಿಂದ ಸೋಲಿಸಿತು.

ಇದೀಗ ಸೇಂಟ್ ವಿನ್ಸೆಂಟ್​ನಲ್ಲಿ ನಡೆದ ಪಂದ್ಯದಲ್ಲಿ ನೇಪಾಳವನ್ನು, ದಕ್ಷಿಣ ಆಫ್ರಿಕಾ 1 ರನ್‌ನಿಂದ ಸೋಲಿಸಿದೆ.