29-05-2024

T20 World Cup: ಕಳೆದ 8 ಆವೃತ್ತಿಗಳಲ್ಲಿ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಪಡೆದವರಿವರು

Author: ಪೃಥ್ವಿ ಶಂಕರ

ಶಾಹಿದ್ ಅಫ್ರಿದಿ (2007): ಪಾಕಿಸ್ತಾನದ ಈ ಸ್ಟಾರ್ ಆಲ್‌ರೌಂಡರ್ ಟೂರ್ನಿಯಲ್ಲಿ 12 ವಿಕೆಟ್‌ ಪಡೆಯುವ ಮೂಲಕ ಜಂಟಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದಲ್ಲದೆ, ಈ ಪ್ರಶಸ್ತಿ ಕೂಡ ಜಯಿಸಿದ್ದರು.

ತಿಲಕರತ್ನೆ ದಿಲ್ಶನ್ (2009): ಶ್ರೀಲಂಕಾದ ಈ ಬ್ಯಾಟ್ಸ್‌ಮನ್ 52.83 ಸರಾಸರಿಯಲ್ಲಿ 317 ರನ್ ಕಲೆಹಾಕಿದ್ದರು. 2 ಬಾರಿ ಡಕ್ ಔಟ್ ಆಗಿದ್ದರೂ ಟೂರ್ನಿಯಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರನಾಗಿದ್ದರು.

ಕೆವಿನ್ ಪೀಟರ್ಸನ್ (2010): 62 ಸರಾಸರಿಯಲ್ಲಿ 248 ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ್ದ ಎರಡನೇ ಆಟಗಾರ ಎನಿಸಿಕೊಂಡಿದ್ದಲ್ಲದೆ ಈ ಪ್ರಶಸ್ತಿ ಕೂಡ ಗೆದ್ದಿದ್ದರು.

ಶೇನ್ ವ್ಯಾಟ್ಸನ್ (2012): ಆಸ್ಟ್ರೇಲಿಯದ ಈ ಸ್ಟಾರ್ ಆಲ್ ರೌಂಡರ್ ಪಂದ್ಯಾವಳಿಯಲ್ಲಿ ಪ್ರಮುಖ ರನ್ ಸ್ಕೋರರ್ ಮತ್ತು ಅತಿ ಹೆಚ್ಚು ವಿಕೆಟ್ ಟೇಕರ್ ಕೂಡ ಆಗಿದ್ದರು. ಅವರು ಆಸ್ಟ್ರೇಲಿಯಾ ಪರ 249 ರನ್ ಗಳಿಸಿ 11 ವಿಕೆಟ್ ಪಡೆದಿದ್ದರು.

ವಿರಾಟ್ ಕೊಹ್ಲಿ 2014: 2014 ರಲ್ಲಿ ಆರು ಪಂದ್ಯಗಳಲ್ಲಿ ನಾಲ್ಕು ಅರ್ಧಶತಕಗಳನ್ನು ಒಳಗೊಂಡಂತೆ 319 ರನ್ ಬಾರಿಸಿ ಈ ಪ್ರಶಸ್ತಿಗೆ ಭಾಜನರಾಗಿದ್ದರು.

ವಿರಾಟ್ ಕೊಹ್ಲಿ 2016: ಈ ಆವೃತ್ತಿಯಲ್ಲೂ ಅಬ್ಬರಿಸಿದ ಕೊಹ್ಲಿ 273 ರನ್ ಬಾರಿಸಿ ಸತತ ಎರಡು ಬಾರಿ ಟೂರ್ನಮೆಂಟ್ ಪ್ರಶಸ್ತಿಯನ್ನು ಗೆದ್ದ ಮೊದಲ ಆಟಗಾರರಾದರು.

ಡೇವಿಡ್ ವಾರ್ನರ್ (2021): ಆಡಿದ ಏಳು ಇನ್ನಿಂಗ್ಸ್‌ಗಳಲ್ಲಿ 289 ರನ್‌ ಬಾರಿಸಿದ್ದರು. ಇದರಲ್ಲಿ ಮೂರು ಅರ್ಧ ಶತಕಗಳನ್ನು ಒಳಗೊಂಡಂತೆ 48.16 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದರು.

ಸ್ಯಾಮ್ ಕರನ್ (2022): ಕಳೆದ ಆವೃತ್ತಿಯಲ್ಲಿ 13 ವಿಕೆಟ್‌ ಪಡೆದಿದ್ದ ಕರನ್, ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಸರಣಿಯ ಆಟಗಾರ ಪ್ರಶಸ್ತಿಯನ್ನು ಗೆದ್ದರು.