ಆಫ್ರಿಕಾದಲ್ಲಿ ಭಾರತೀಯ ಆಟಗಾರರಿಗೆ ಅವಮಾನ?
08-December-2023
Author: Vinay Bhat
ಭಾರತ ತಂಡ ದಕ್ಷಿಣ ಆಫ್ರಿಕಾ ತಲುಪಿದ್ದು, ಡಿಸೆಂಬರ್ 10ರಿಂದ ಟಿ20 ಸರಣಿ ಆರಂಭವಾಗಲಿದೆ. ಟಿ-20 ವಿಶ್ವಕಪ್‌ಗೆ ಇದು ಅತ್ಯಂತ ಮಹತ್ವದ ಪಂದ್ಯವಾಗಿದೆ.
ಮಿಷನ್ ದಕ್ಷಿಣ ಆಫ್ರಿಕಾ
ಸೂರ್ಯಕುಮಾರ್ ಯಾದವ್ ಟಿ-20 ತಂಡದ ನಾಯಕರಾಗಿದ್ದಾರೆ, ಬಿಸಿಸಿಐ ಭಾರತ ತಂಡ ದಕ್ಷಿಣ ಆಫ್ರಿಕಾ ತಲುಪಿದ ವಿಡಿಯೋವನ್ನು ಹಂಚಿಕೊಂಡಿದೆ.
ಸೂರ್ಯನ ನಾಯಕತ್ವ
ಈ ವಿಡಿಯೋದಲ್ಲಿ ಅದ್ಭುತ ದೃಶ್ಯ ಕಂಡು ಬಂದಿದ್ದು, ಟೀಮ್ ಇಂಡಿಯಾವನ್ನು ಮಳೆಯು ಸ್ವಾಗತಿಸಿತು. ಆಟಗಾರರು ವಿಮಾನದಿಂದ ಇಳಿದ ತಕ್ಷಣ ತುಂತುರು ಮಳೆ ಸುರಿಯಲಾರಂಭಿಸಿದೆ.
ಮಳೆಯ ಸ್ವಾಗತ
ವಿಮಾನದಿಂದ ಇಳಿದು ಬಸ್‌ಗೆ ಏರುವ ಸಂದರ್ಭ ಮಳೆ ಬಂದಿದ್ದು, ಕೆಲ ಆಟಗಾರರು ಮಳೆಯಿಂದ ರಕ್ಷಿಸಿಕೊಳ್ಳಲು ತಮ್ಮ ಲಗೇಜ್ ಅನ್ನು ತಲೆಯ ಮೇಲೆ ಹೊತ್ತುಕೊಂಡು ಓಡಿದ್ದಾರೆ.
ಅವಮಾನವಲ್ಲ
ಬಿಸಿಸಿಐ ಹಂಚಿಕೊಂಡ ವೀಡಿಯೊದಲ್ಲಿ, ಆಟಗಾರರು ಮೋಜು-ಮಸ್ತಿ ಮಾಡುತ್ತಿರುವುದನ್ನು ಕಾಣಬಹುದು. ಎಲ್ಲ ಪ್ಲೇಯರ್ಸ್ ಸಂಭ್ರಮದಲ್ಲಿದ್ದಾರೆ.
ಸಂಭ್ರಮದಲ್ಲಿ ಪ್ಲೇಯರ್ಸ್
ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 3 ಟಿ20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಬೇಕಿದೆ. ಟಿ20 ಪಂದ್ಯಗಳು ಡಿಸೆಂಬರ್ 10, 12 ಮತ್ತು 14 ರಂದು ನಡೆಯಲಿವೆ.
ಟಿ-20 ಪಂದ್ಯ
ಡಿಸೆಂಬರ್ 17 ರಂದು ಪ್ರಥಮ ಏಕದಿನ ನಡೆಯಲಿದೆ. ಡಿಸೆಂಬರ್ 19 ರಂದು 2ನೇ ಏಕದಿನ ಮತ್ತು ಡಿಸೆಂಬರ್ 21 ರಂದು 3ನೇ ಏಕದಿನ ಆಯೋಜಿಸಲಾಗಿದೆ.
ODI ಸರಣಿ
ಡಿಸೆಂಬರ್ 26-30 ವರೆಗೆ ಮೊದಲನೇ ಟೆಸ್ಟ್ ಪಂದ್ಯ ನಡೆಯಲಿದೆ. ಜನವರಿ 3-7 ಎರಡನೇ ಟೆಸ್ಟ್ ನ್ಯೂಲ್ಯಾಂಡ್ಸ್, ಕೇಪ್ ಟೌನ್'ನಲ್ಲಿ ಆಯೋಜಿಸಲಾಗಿದೆ.
ಟೆಸ್ಟ್ ಸರಣಿ
ಐಪಿಎಲ್ 2024 ಹರಾಜಿನಲ್ಲಿ RCB ಕಣ್ಣಿಟ್ಟಿದೆ ಈ 6 ಪ್ಲೇಯರ್ಸ್ ಮೇಲೆ