08-10-2023

ಸೇಡು: 36 ವರ್ಷಗಳಿಂದ ಕಾದು ಕುಳಿತಿದೆ ಟೀಮ್ ಇಂಡಿಯಾ

ಭಾರತ-ಆಸ್ಟ್ರೇಲಿಯಾ

ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐಸಿಸಿ ಏಕದಿನ ವಿಶ್ವಕಪ್ ಪಂದ್ಯವು ಚೆನ್ನೈನ ಐಕಾನಿಕ್ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಅಂದು ಸೋಲು

1987ರ ವಿಶ್ವಕಪ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಚೆನ್ನೈನಲ್ಲಿ ಮುಖಾಮುಖಿಯಾಗಿದ್ದವು. ಇದರಲ್ಲಿ ಭಾರತ ಸೋತಿತ್ತು.

36 ವರ್ಷಗಳ ಸೇಡು

ಇದೀಗ 36 ವರ್ಷಗಳ ಬಳಿಕ ಏಕದಿನ ವಿಶ್ವಕಪ್‌ನಲ್ಲಿ ಇದೇ ಮೈದಾನದಲ್ಲಿ ಎರಡೂ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. ಇದು ಭಾರತಕ್ಕೆ ಸೇಡಿನ ಪಂದ್ಯ.

ಅವಕಾಶ ಕೈಬಿಡುವುದಿಲ್ಲ

ನಾವು ಸಿಕ್ಕ ಅವಕಾಶವನ್ನು ಕೈಬಿಡುವುದಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಎಲ್ಲ ವಿಭಾಗಗಳಿಂದ ನಾವು ಸಿದ್ದರಾಗಿದ್ದೇವೆ ಎಂದು ರೋಹಿತ್ ಹೇಳಿದ್ದಾರೆ.

ಹೈವೋಲ್ಟೇಜ್ ಮ್ಯಾಚ್

1987ರ ವಿಶ್ವಕಪ್‌ನಲ್ಲಿನ ಸೋಲಿಗೆ ಭಾರತ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದು, ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಮ್ಯಾಚ್ ಆಗುವುದ ಖಚಿತ.

ಚೆನ್ನೈನಲ್ಲಿ ಆಸೀಸ್

ಭಾರತ ಸೇಡು ತೀರಿಸಿಕೊಳುವುದು ಅಷ್ಟೊಂದು ಸುಲಭವಲ್ಲ. ಏಕೆಂದರೆ ಚೆನ್ನೈ ಆಸ್ಟ್ರೇಲಿಯಾದ ಭದ್ರಕೋಟೆ. ಇಲ್ಲಿ ಆಡಿದ ಎಲ್ಲಾ 3 ವಿಶ್ವಕಪ್ ಪಂದ್ಯಗಳನ್ನು ಅವರು ಗೆದ್ದಿದ್ದಾರೆ.

8ನೇ ವಿಶ್ವಕಪ್

ಚೆನ್ನೈ ಇದುವರೆಗೆ ಆಸ್ಟ್ರೇಲಿಯಾದ 3 ಪಂದ್ಯಗಳು ಸೇರಿದಂತೆ 7 ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಿದೆ. ಅಂದರೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದು 8ನೇ ಪಂದ್ಯ.

India Playing XI: ಇಂದು ಆಡಲಿರುವ 11 ಬಲಿಷ್ಠ ಆಟಗಾರರು ಇವರೇ ನೋಡಿ