08-02-2024

ಅಂಡರ್ 19 ವಿಶ್ವಕಪ್​ನಲ್ಲಿ ಭಾರತ ಅಜೇಯ ಓಟ ಹೇಗಿತ್ತು ಗೊತ್ತಾ?

Author: ಪೃಥ್ವಿ ಶಂಕರ

ವಿಶ್ವಕಪ್‌ ಲೀಗ್​ನ ಮೊದಲ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶವನ್ನು 84 ರನ್‌ಗಳಿಂದ ಸೋಲಿಸಿತ್ತು.

ಆ ಬಳಿಕ ನಡೆದ ಎರಡನೇ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಬರೋಬ್ಬರಿ 201 ರನ್‌ಗಳಿಂದ ಸೋಲಿಸಿತ್ತು.

ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ತಂಡವನ್ನು ಸಹ 201 ರನ್‌ಗಳಿಂದ ಸೋಲಿಸಿತ್ತು.

ಆ ಬಳಿಕ ನಡೆದ ಸೂಪರ್ ಸಿಕ್ಸ್ ಸುತ್ತಿನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 214 ರನ್‌ಗಳಿಂದ ಸೋಲಿಸಿತು.

ಸೂಪರ್ ಸಿಕ್ಸ್ ಸುತ್ತಿನ ಎರಡನೇ ಪಂದ್ಯದಲ್ಲಿ ನೇಪಾಳವನ್ನು ಭಾರತ 132 ರನ್‌ಗಳಿಂದ ಸೋಲಿಸಿತು.

ನಂತರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು 2 ವಿಕೆಟ್‌ಗಳಿಂದ ಸೋಲಿಸಿ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಇದೀಗ ಫೆಬ್ರವರಿ 11 ರ ಭಾನುವಾರದಂದು ನಡೆಯುವ ಈ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಬಲಿಷ್ಠ ಟೀಂ ಇಂಡಿಯಾವನ್ನು ಎದುರಿಸಲಿದೆ.