03-12-2023

ಈ ವರ್ಷ 3 ಮಾದರಿಯಲ್ಲಿ ಅಧಿಕ ರನ್ ಕಲೆಹಾಕಿದ ನಾಯಕ ಯಾರು ಗೊತ್ತಾ?

Author: ಪೃಥ್ವಿ ಶಂಕರ

ರೋಹಿತ್ ಶರ್ಮಾ ಈ ವರ್ಷ ಎಲ್ಲಾ ಮೂರು ಮಾದರಿಗಳಲ್ಲಿ ನಾಯಕನಾಗಿ ಗರಿಷ್ಠ 1795 ರನ್ ಕಲೆ ಹಾಕಿದ್ದಾರೆ.

ಯುಎಇ ನಾಯಕ ಮುಹಮ್ಮದ್ ವಾಸಿಂ ಈ ವರ್ಷ 1332 ರನ್ ಗಳಿಸಿದ್ದಾರೆ.

ಈ ಪಟ್ಟಿಯಲ್ಲಿ ಬಾಬರ್ ಆಝಂ 1322 ರನ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಆಫ್ರಿಕಾ ನಾಯಕ ಟೆಂಬಾ ಬವುಮಾ 2023 ರಲ್ಲಿ ಇಲ್ಲಿಯವರೆಗೆ 982 ರನ್ ಬಾರಿಸಿದ್ದಾರೆ.

ನೇಪಾಳ ನಾಯಕ ರೋಹಿತ್ ಪೌಡೆಲ್ ಈ ವರ್ಷ 932 ರನ್ ಸಿಡಿಸಿದ್ದಾರೆ.

ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಈ ವರ್ಷ 3 ಮಾದರಿಯಲ್ಲಿ 850 ರನ್ ಗಳಿಸಿದ್ದಾರೆ.

ಜಿಂಬಾಬ್ವೆ ನಾಯಕ ಕ್ರೇಗ್ ಇರ್ವಿನ್ ಈ ವರ್ಷ 700 ರನ್ ಸಿಡಿಸಿದ್ದಾರೆ.

ನ್ಯೂಜಿಲೆಂಡ್​ನ ಟಾಮ್ ಲೇಥಮ್ ಈ ವರ್ಷ ನಾಯಕನಾಗಿ 700 ರನ್ ಬಾರಿಸಿದ್ದಾರೆ.

ನೆದರ್ಲೆಂಡ್ಸ್ ತಂಡದ ಸ್ಕಾಟ್ ಎಡ್ವರ್ಡ್ಸ್ ಈ ವರ್ಷ 697 ರನ್ ಗಳಿಸಿದ್ದಾರೆ.

ಪಪುವಾ ನ್ಯೂಗಿನಿಯಾ ತಂಡದ ನಾಯಕ ಅಸದ್ ವಾಲಾ ಈ ವರ್ಷ 682 ರನ್ ಬಾರಿಸಿದ್ದಾರೆ.