ಒಂದು ಕ್ಯಾಲೆಂಡರ್ ವರ್ಷದಲ್ಲಿ ಅಧಿಕ ರನ್ ಬಾರಿಸಿದ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ.

ಮಾರ್ಕ್ ವಾ

1999 ರಲ್ಲಿ ಮಾರ್ಕ್ ವಾ 36 ಪಂದ್ಯಗಳಿಂದ 1468 ರನ್ ಕಲೆಹಾಕಿದ್ದರು.

ಮಾರ್ಟಿನ್ ಗಪ್ಟಿಲ್

2015 ರಲ್ಲಿ ಮಾರ್ಟಿನ್ ಗಪ್ಟಿಲ್ 32 ಪಂದ್ಯಗಳಿಂದ 1489 ರನ್ ಬಾರಿಸಿದ್ದರು.

ರೋಹಿತ್ ಶರ್ಮಾ

2019 ರಲ್ಲಿ ರೋಹಿತ್ ಶರ್ಮಾ 28 ಪಂದ್ಯಗಳಲ್ಲಿ 1490 ರನ್ ಸಿಡಿಸಿದ್ದರು.

ಸೌರವ್ ಗಂಗೂಲಿ

2000 ದಲ್ಲಿ ಸೌರವ್ ಗಂಗೂಲಿ 32 ಪಂದ್ಯಗಳಿಂದ 1579 ರನ್ ಬಾರಿಸಿದ್ದರು.

ಸಯೀದ್ ಅನ್ವರ್

1996 ರಲ್ಲಿ ಸಯೀದ್ ಅನ್ವರ್ 36 ಪಂದ್ಯಗಳನ್ನಾಡಿ 1595 ರನ್ ಸಿಡಿಸಿದ್ದರು.

ಮ್ಯಾಥ್ಯೂ ಹೇಡನ್

2007 ರಲ್ಲಿ ಈ ಆಸೀಸ್ ಬ್ಯಾಟರ್ 32 ಪಂದ್ಯಗಳಿಂದ 1601 ಚಚ್ಚಿದ್ದರು.

ಸಚಿನ್ ತೆಂಡೂಲ್ಕರ್

1996 ರಲ್ಲಿ 32 ಪಂದ್ಯಗಳನ್ನಾಡಿದ್ದ ಸಚಿನ್ 1611 ರನ್ ಕಲೆಹಾಕಿದ್ದರು.

ರಾಹುಲ್ ದ್ರಾವಿಡ್

1999 ರಲ್ಲಿ ಟೀಂ ಇಂಡಿಯಾದ ಹಾಲಿ ಕೋಚ್ 43 ಪಂದ್ಯಗಳನ್ನಾಡಿ 1761 ರನ್ ಬಾರಿಸಿದ್ದರು.

ಸೌರವ್ ಗಂಗೂಲಿ

ಬಂಗಾಳದ ಹುಲಿ ಖ್ಯಾತಿಯ ಗಂಗೂಲಿ 1999 ರಲ್ಲಿ 41 ಪಂದ್ಯಗಳಿಂದ 1767 ರನ್ ಸಿಡಿಸಿದ್ದರು.

ಸಚಿನ್ ತೆಂಡೂಲ್ಕರ್

1998 ರಲ್ಲಿ 34 ಪಂದ್ಯಗಳನ್ನಾಡಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 1894 ರನ್ ಸಿಡಿಸಿದ್ದರು.