19-10-2023

ಎರಡು ಬದಲಾವಣೆ: ಭಾರತದ ಪ್ಲೇಯಿಂಗ್ XI ಇಲ್ಲಿದೆ

ಭಾರತ-ಬಾಂಗ್ಲಾ

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಇಂದು 17ನೇ ಪಂದ್ಯ ನಡೆಯಲಿದ್ದು ಭಾರತ ಬಾಂಗ್ಲಾದೇಶ ತಂಡಗಳು ಮುಖಾಮುಖಿ ಆಗಲಿದೆ.

ಪಂದ್ಯ ಎಲ್ಲಿ?

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಭಾರತ-ಬಾಂಗ್ಲಾ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

2 ಬದಲಾವಣೆ

ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಪ್ರಮುಖ ಎರಡು ಬದಲಾವಣೆ ನಿರೀಕ್ಷಿಸಲಾಗಿದೆ. ದೊಡ್ಡ ಪಂದ್ಯ ಆಗಿರದ ಕಾರಣ ಇವರಿಗೆ ವಿಶ್ರಾಂತಿ ನೀಡಬಹುದು.

ಶಾರ್ದೂಲ್ ಔಟ್

ಈ ಬಾರಿಯ ವಿಶ್ವಕಪ್​ನಲ್ಲಿ ಎದುರಾಳಿಗೆ ದೊಡ್ಡ ಸವಾಲು ನೀಡದ ಶಾರ್ದೂಲ್ ಠಾಕೂರ್ ಬದಲಿಗೆ ಮೊಹಮ್ಮದ್ ಶಮಿ ಕಣಕ್ಕಿಳಿಯುವ ಸಂಭವವಿದೆ.

ಸೂರ್ಯ ಇನ್

ಸೂರ್ಯಕುಮಾರ್ ಯಾದವ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಬಹುದು. ಇವರು ಕೊಹ್ಲಿ ಅಥವಾ ಅಯ್ಯರ್ ಜಾಗಕ್ಕೆ ಬರಬಹುದು.

ಪ್ಲೇಯಿಂಗ್ XI

ರೋಹಿತ್, ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್, ಕೆಎಲ್ ರಾಹುಲ್, ಹಾರ್ದಿಕ್, ಜಡೇಜಾ, ಆರ್. ಅಶ್ವಿನ್, ಕುಲ್ದೀಪ್, ಬುಮ್ರಾ, ಶಮಿ, ಸಿರಾಜ್.

ಪಿಚ್ ಹೇಗಿದೆ?:

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಪಿಚ್ ಬ್ಯಾಟಿಂಗ್ ಸ್ವರ್ಗ ಎಂದು ಹೇಳಬಹುದು. ಬೌಲರ್​ಗಳಿಗೆ ಇಲ್ಲಿ ದೊಡ್ಡ ಸವಾಲು ಎನ್ನಬಹುದು.

ಹವಾಮಾನ

ಪುಣೆಯಲ್ಲಿ ನಿನ್ನೆ (ಬುಧವಾರ) ಲಘುವಾದ ತುಂತುರು ಮಳೆ ಬಂದಿದೆ. ಆದರೆ, ಅಕ್ಟೋಬರ್ 19 ರಂದು ಮಳೆಯ ತೊಂದರೆ ಇರುವುದಿಲ್ಲ ಎಂದು ಅಕ್ಯುವೆದರ್ ಹೇಳಿದೆ.

ವಿಶ್ವಕಪ್​ನಲ್ಲಿ ಬೇರೆ ದೇಶದ ಪರ ಆಡುತ್ತಿರುವ ಭಾರತೀಯರು