ಕೊಹ್ಲಿ ಮೊದಲ ಟಿ20 ಆಡದಿರಲು ಕಾರಣ ಬಹಿರಂಗ

11 January 2024

Author: Vinay Bhat

ಭಾರತ-ಅಫ್ಘಾನಿಸ್ತಾನ ನಡುವಿನ 3 ಪಂದ್ಯಗಳ ಟಿ20 ಸರಣಿಯು ಜನವರಿ 11 ರಿಂದ ಆರಂಭವಾಗಲಿದೆ. ಈ ಸರಣಿಯೊಂದಿಗೆ ರೋಹಿತ್-ಕೊಹ್ಲಿ ಮರಳಲಿದ್ದಾರೆ.

ಭಾರತ vs ಅಫ್ಘಾನಿಸ್ತಾನ

ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದ್ದು, ವಿರಾಟ್ ಕೊಹ್ಲಿ ಈ ಪಂದ್ಯದ ಭಾಗವಾಗಿಲ್ಲ. ಈ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.

ವಿರಾಟ್ ಔಟ್

ವೈಯಕ್ತಿಕ ಕಾರಣಗಳಿಂದ ಕೊಹ್ಲಿ ಈ ಪಂದ್ಯದಲ್ಲಿ ಆಡುವುದಿಲ್ಲ, ಆದರೆ ಜನವರಿ 14 ಮತ್ತು 17 ರಂದು ನಡೆಯಲಿರುವ 2 ಮತ್ತು 3ನೇ ಟಿ20 ಆಡುತ್ತಾರೆ ಎಂದು ಹೇಳಿದ್ದಾರೆ.

ದ್ರಾವಿಡ್ ಹೇಳಿದ್ದೇನು?

ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಮೊದಲ ಟಿ20ಯಿಂದ ಹೊರಗುಳಿದಿದ್ದಾರೆ. ಈಗ ಪ್ರಶ್ನೆ ಏನೆಂದರೆ, ಕೊಹ್ಲಿಯ ಈ ವೈಯಕ್ತಿಕ ಕಾರಣವೇನು?.

ವೈಯಕ್ತಿಕ ಕಾರಣವೇನು?

ಜನವರಿ 11 ಕೊಹ್ಲಿ ಕುಟುಂಬಕ್ಕೆ ಬಹಳ ವಿಶೇಷವಾದ ದಿನವಾಗಿದೆ. ಈ ದಿನ ವಿರಾಟ್ ಮತ್ತು ಅನುಷ್ಕಾ ಶರ್ಮಾ ಅವರ ಪುತ್ರಿ ವಾಮಿಕಾ ಅವರ ಜನ್ಮದಿನ.

ಮಗಳ ಹುಟ್ಟುಹಬ್ಬ

ವಿರಾಟ್ ತನ್ನ ಮಗಳ ಮೂರನೇ ಹುಟ್ಟುಹಬ್ಬವನ್ನು ಅವಳೊಂದಿಗೆ ಆಚರಿಸಲು ಬಯಸಿದ ಕಾರಣ ಟೀಮ್ ಮ್ಯಾನೇಜ್‌ಮೆಂಟ್ ಕೊಹ್ಲಿಗೆ ರಜೆ ನೀಡಿದೆ.

ಮೂರನೇ ಹುಟ್ಟುಹಬ್ಬ

ವಿರಾಟ್ ಕೊಹ್ಲಿ ಸುಮಾರು ಒಂದು ವರ್ಷಗಳ ಬಳಿಕ ಟಿ20 ಕ್ರಿಕೆಟಿಗೆ ಮರಳಿದ್ದಾರೆ. ಅವರು ಕೊನೆಯದಾಗಿ ಟಿ20 ವಿಶ್ವಕಪ್'ನಲ್ಲಿ ಕಾಣಿಸಿಕೊಂಡಿದ್ದರು.

ಒಂದು ವರ್ಷ