ಲಂಡನ್​ನಲ್ಲಿ ಮಸ್ತ್ ಮಜಾ ಮಾಡುತ್ತಿರುವ ಕೊಹ್ಲಿ-ಅನುಷ್ಕಾ

05-December-2023

Author: Vinay Bhat

2023 ರ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಲಂಡನ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ.

ವಿರಾಟ್-ಅನುಷ್ಕಾ

ವಿರಾಟ್-ಅನುಷ್ಕಾ ತಮ್ಮ ನೆಚ್ಚಿನ ಲಂಡನ್ ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನೆಚ್ಚಿನ ರೆಸ್ಟೋರೆಂಟ್‌

ವಿರಾಟ್-ಅನುಷ್ಕಾ ಲಂಡನ್ ಪ್ರವಾಸ ಬೆಳೆಸಿರುವುದು ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಲಂಡನ್'ನಲ್ಲಿ ಕಾಣಿಸಿಕೊಂಡಿದ್ದರು.

ಲಂಡನ್ ಹಾಲಿಡೇ

ಸುರೇಂದರ್ ಮೋಹನ್ ಅವರು ವಿರಾಟ್-ಅನುಷ್ಕಾ ಅವರನ್ನು ಮ್ಯಾಡಾಕ್ಸ್ ಸ್ಟ್ರೀಟ್‌ನಲ್ಲಿರುವ ಬಾಂಬೆ ಬಸಲ್ ರೆಸ್ಟೋರೆಂಟ್‌ಗೆ ಸ್ವಾಗತಿಸಿದ್ದಾರೆ.

ಬಸಲ್ ರೆಸ್ಟೋರೆಂಟ್‌

ಅನುಷ್ಕಾ ಶರ್ಮಾ ಅವರ ನೆಚ್ಚಿನ ಲಂಡನ್ ರೆಸ್ಟೋರೆಂಟ್‌ನಲ್ಲಿ ಇದಾಗಿದ್ದು, ಕಳೆದ ವರ್ಷ ಅಕ್ಟೋಬರ್‌ನಲ್ಲಿಯೂ ಅನುಷ್ಕಾ ತನ್ನ ಹೆತ್ತವರೊಂದಿಗೆ ಇಲ್ಲಿದೆ ಬಂದಿದ್ದರು.

ಅನುಷ್ಕಾ ಶರ್ಮಾ

2023 ರ ಏಕದಿನ ವಿಶ್ವಕಪ್ ಫೈನಲ್ ಸೋಲಿನ ನಂತರ ಕೊಹ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಿದ್ದಾರೆ.

2023 ODI ವಿಶ್ವಕಪ್

ಭಾರತ ಈ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಏಕದಿನ ಮತ್ತು ಟಿ20 ಐ ಸರಣಿಯಿಂದ ಕೂಡ ಕೊಹ್ಲಿ ಮತ್ತು ರೋಹಿತ್ ಶರ್ಮಾ ವಿರಾಮ ಪಡೆದುಕೊಂಡಿದ್ದಾರೆ.

ಭಾರತದ ಆಫ್ರಿಕಾ ಪ್ರವಾಸ

ಡಿಸೆಂಬರ್ 26 ರಿಂದ ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಲಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಮತ್ತೆ ಆಟಕ್ಕೆ ಮರಳಲಿದ್ದಾರೆ.

ಟೆಸ್ಟ್ ಸರಣಿ