26-05-2024

IPL 2024: ಆರೆಂಜ್ ಕ್ಯಾಪ್ ಗೆದ್ದ ಕಿಂಗ್ ಕೊಹ್ಲಿಗೆ ಸಿಕ್ಕ ಹಣವೇಷ್ಟು..!

Author: ಪೃಥ್ವಿ ಶಂಕರ

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಚೆನ್ನೈನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದೊಂದಿಗೆ ಐಪಿಎಲ್ 2024 ರ ಚಾಂಪಿಯನ್ ಯಾರು ಎಂಬುದು ನಿರ್ಧಾರವಾಗಲಿದೆ.

ಈಗ ಯಾವ ತಂಡ ಚಾಂಪಿಯನ್ ಆಗಲಿ ಫೈನಲ್​ಗೂ ಮುನ್ನ ವಿರಾಟ್ ಕೊಹ್ಲಿ ಮಾತ್ರ ಈ ದಾಖಲೆ ಮಾಡಿದ್ದಾರೆ.

ವಿರಾಟ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ತಲುಪಲು ವಿಫಲವಾಗಿದೆ. ಆದರೆ ಉತ್ತಮ ಪ್ರದರ್ಶನ ನೀಡಿದ ಕೊಹ್ಲಿ ತಮ್ಮ ಹೆಸರಿನಲ್ಲಿ ಮತ್ತೊಂದು ದಾಖಲೆಯನ್ನು ಮಾಡಿದ್ದಾರೆ.

ಹೌದು, ವಿರಾಟ್ ಕೊಹ್ಲಿ ಈ ಸೀಸನ್ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದು, ಆರೆಂಜ್ ಕ್ಯಾಪ್ ಅನ್ನು ವಶಪಡಿಸಿಕೊಂಡಿದ್ದಾರೆ.

ಈ ಸೀಸನ್​ನಲ್ಲಿ ಕೊಹ್ಲಿ ಆಡಿದ 15 ಇನ್ನಿಂಗ್ಸ್‌ಗಳಲ್ಲಿ 741 ರನ್ ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌ನ ಟ್ರಾವಿಸ್ ಹೆಡ್ 567 ರನ್ ಬಾರಿಸಿದ್ದಾರೆ.

ವಾಸ್ತವವಾಗಿ, ಕೊಹ್ಲಿ ಐಪಿಎಲ್‌ನಲ್ಲಿ 2 ಆರೆಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಆಗಲಿದ್ದಾರೆ.

ಈ ಹಿಂದೆ ಕೊಹ್ಲಿ 2016ರ ಸೀಸನ್​ನಲ್ಲಿ 973 ರನ್‌ ಬಾರಿಸುವ ಮೂಲಕ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದಿದ್ದರು.

ಇದೀಗ ಅಧಿಕ ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ಗೆದ್ದಿರುವ ವಿರಾಟ್ ಕೊಹ್ಲಿ ಬಹುಮಾನದ ರೂಪದಲ್ಲಿ 15 ಲಕ್ಷ ರೂಗಳನ್ನು ಪಡೆಯಲ್ಲಿದ್ದಾರೆ.