IND vs NZ: ಕಿಂಗ್ ಕೊಹ್ಲಿ ಸೃಷ್ಟಿಸಿದ ದಾಖಲೆಗಳು ನೋಡಿ
23 October 2023
ವಿಶ್ವಕಪ್'ನಲ್ಲಿ ಭಾನುವಾರ ನಡೆದ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 104 ಎಸೆತಗಳಲ್ಲಿ 8 ಫೋರ್, 2 ಸಿಕ್ಸರ್'ನೊಂದಿಗೆ 95 ರನ್ ಸಿಡಿಸಿದರು.
95 ರನ್
95 ರನ್ ಸಿಡಿಸುವ ಮೂಲಕ ಕೊಹ್ಲಿ ಎಲ್ಲಾ ಐಸಿಸಿ ವೈಟ್-ಬಾಲ್ ಪಂದ್ಯಾವಳಿಗಳಲ್ಲಿ 3,000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
3000 ರನ್
31 ವಿಶ್ವಕಪ್ ಪಂದ್ಯದಲ್ಲಿ 1,384 ರನ್ ಸಿಡಿಸಿರುವ ಕೊಹ್ಲಿ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ 4ನೇ ಮತ್ತು ಭಾರತದ 2ನೇ ಆಟಗಾರನಾಗಿದ್ದಾರೆ.
ಎರಡನೇ ಭಾರತೀಯ
ಕೊಹ್ಲಿ ಅವರು ಲೆಜೆಂಡ್ ಸನತ್ ಜಯಸೂರ್ಯ (13,430 ರನ್ ಗಳಿಸಿ) ಸಾಧನೆ ಹಿಂದಿಕ್ಕಿ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ 4ನೇ ಆಟಗಾರ ಎನಿಸಿಕೊಂಡಿದ್ದಾರೆ.
4ನೇ ಆಟಗಾರ
ಹಾಗೆಯೇ ವಿರಾಟ್ ಕೊಹ್ಲಿ ವಿಶ್ವಕಪ್ ಇತಿಹಾಸದಲ್ಲಿ ಜಂಟಿ ಎರಡನೇ ಅತಿ ಹೆಚ್ಚು 50+ (12) ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
50+ ರನ್
ವಿರಾಟ್ ಕೊಹ್ಲಿ, 11 ಬಾರಿ 50ಕ್ಕೂ ಅಧಿಕ ರನ್ ಸಿಡಿಸಿದ ರಿಕಿ ಪಾಂಟಿಂಗ್ ಮತ್ತು ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.
ರೋಹಿತ್ ದಾಖಲೆ ಉಡೀಸ್
ಕೇವಲ 5 ರನ್ಗಳಿಂದ ಶತಕ ವಂಚಿತರಾದ ಕೊಹ್ಲಿ, ಸಚಿನ್ ಅವರ 49 ಏಕದಿನ ಶತಕಗಳ ದಾಖಲೆ ಸರಿಗಟ್ಟುವ ಅವಕಾಶವನ್ನು ಕಳೆದುಕೊಂಡರು.
49 ಶತಕ
ಭಾನುವಾರ ನ್ಯೂಝಿಲೆಂಡ್ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ.
ಭಾರತಕ್ಕೆ ಜಯ
ನೆದರ್ಲೆಂಡ್ಸ್ ಆಟಗಾರರಿಗೆ ಸಿಗುವ ಸಂಬಳ ಕೇಳಿದ್ರೆ ಶಾಕ್ ಆಗ್ತೀರಿ
ಇನ್ನಷ್ಟು ಓದಿ