ಆಫೀಸ್ ಬಾಡಿಗೆಗೆ ಕೊಟ್ಟ ವಿರಾಟ್ ಕೊಹ್ಲಿ: ತಿಂಗಳಿಗೆ ಎಷ್ಟು ರೆಂಟ್ ಗೊತ್ತೇ?

07-March-2024

Author: Vinay Bhat

ಟೀಮ್ ಇಂಡಿಯಾ ಸ್ಟಾರ್ ವಿರಾಟ್ ಕೊಹ್ಲಿ ಅವರ ನಿವ್ವಳ ಮೌಲ್ಯವು ಒಂದು ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು. ಅವರ ಗಳಿಕೆಯು ಪ್ರತಿದಿನವೂ ಅಧಿಕವಾಗುತ್ತಿರುತ್ತದೆ.

ವಿರಾಟ್ ಗಳಿಕೆ

ಕ್ರಿಕೆಟ್ ಹೊರತಾಗಿ, ವಿರಾಟ್ ಕೊಹ್ಲಿ ಕೆಲ ಪ್ರಸಿದ್ಧ ಕಂಪನಿಗಳಲ್ಲಿ ಜಾಹೀರಾತು ಮತ್ತು ಹೂಡಿಕೆಯಿಂದ ಹಣವನ್ನು ಗಳಿಸುತ್ತಾರೆ. ಅವರ ಬಳಿ ಹಲವು ಕಡೆ ಆಸ್ತಿಯೂ ಇದೆ.

ಹಣದ ದಾರಿ

ಇದೀಗ ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಗುರ್ಗಾಂವ್‌ನಲ್ಲಿ ತಮ್ಮ 12 ಕಚೇರಿ ಸ್ಥಳಗಳನ್ನು ಬಾಡಿಗೆಗೆ ನೀಡಿದ್ದಾರೆ. ಇದರ ರೆಂಟ್ ಕೇಳಿದ್ರೆ ಶಾಕ್ ಆಗ್ತೀರಿ.

ಬಾಡಿಗೆ ಕಚೇರಿ

ವಿರಾಟ್ ಕೊಹ್ಲಿ 12 ಕಚೇರಿ ಸ್ಥಳಗಳಿಗೆ ಲಕ್ಷ ಮೌಲ್ಯದ ಬಾಡಿಗೆ ಪಡೆಯಲಿದ್ದಾರೆ. ವರದಿಯ ಪ್ರಕಾರ, ಅವರು ಪ್ರತಿ ತಿಂಗಳು ಸುಮಾರು 9 ಲಕ್ಷ ರೂ. ರೆಂಟ್ ಪಡೆಯುತ್ತಾರೆ.

ರೆಂಟ್ ಎಷ್ಟು?

ವಿರಾಟ್ ಕೊಹ್ಲಿ 9 ವರ್ಷಗಳ ಒಪ್ಪಂದದ ಮೇರೆಗೆ ಬಾಡಿಗೆಗೆ ಕಚೇರಿ ಸ್ಥಳವನ್ನು ನೀಡಿದ್ದಾರೆ. ಈ ದರವು ಪ್ರತಿ ವರ್ಷ ಶೇಕಡಾ 5 ರಷ್ಟು ಹೆಚ್ಚಾಗುತ್ತದೆ.

9 ವರ್ಷಗಳ ಒಪ್ಪಂದ

ವಿರಾಟ್ ಕೊಹ್ಲಿ ಇತ್ತೀಚೆಗೆ ಹಲವು ಆಸ್ತಿಗಳನ್ನು ಖರೀದಿಸಿದ್ದಾರೆ. ಅಲಿಬಾಗ್ ನಲ್ಲಿ ಫಾರ್ಮ್ ಹೌಸ್ ಕೂಡ ಖರೀದಿಸಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು.

ವಿರಾಟ್ ಆಸ್ತಿ

ಇತ್ತೀಚೆಗಷ್ಟೇ ರೋಹಿತ್ ಶರ್ಮಾ ಅವರು ತಮ್ಮ ಎರಡು ಫ್ಲಾಟ್‌ಗಳನ್ನು ಬಾಡಿಗೆಗೆ ನೀಡಿದ್ದರು, ಇದಕ್ಕಾಗಿ ಅವರು ಪ್ರತಿ ತಿಂಗಳು 3 ಲಕ್ಷ ರೂ. ಪಡೆಯುತ್ತಾರೆ.

ರೋಹಿತ್ ಶರ್ಮಾ