T20 World Cup 2024: ಈ ಮೂವರು ಭಾರತೀಯರಿಗೆ ಇದು ಕೊನೆಯ ಟಿ20 ವಿಶ್ವಕಪ್..!
Author: ಪೃಥ್ವಿ ಶಂಕರ
ಐಪಿಎಲ್ 2024 ರ ನಂತರ, ಅಮೆರಿಕ ಮತ್ತು ವೆಸ್ಟ್ ಇಂಡೀಸ್ನ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಆಯೋಜನೆಗೊಳ್ಳುತ್ತಿದೆ.
ಈ ಮಿನಿ ವಿಶ್ವಕಪ್‌ಗೆ ಈಗಾಗಲೇ ರೋಹಿತ್ ಶರ್ಮಾ ನೇತೃತ್ವದ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.
ಪ್ರಕಟವಾಗಿರುವ ಈ 15 ಸದಸ್ಯರ ಈ ತಂಡದಲ್ಲಿ ಪ್ರಮುಖವಾಗಿ ಈ ಮೂವರು ಲೆಜೆಂಡರಿ ಕ್ರಿಕೆಟರ್ಗಳಿಗೆ ಇದು ಕೊನೆಯ ಟಿ20 ವಿಶ್ವಕಪ್ ಆಗಿದೆ.
ಭಾರತ ತಂಡದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ವಯಸ್ಸು ಮತ್ತು ಕಿರಿಯ ಆಟಗಾರರಿಗೆ ಅವಕಾಶ ನೀಡುವ ಕಾರಣ ಭವಿಷ್ಯದಲ್ಲಿ ಟಿ20 ವಿಶ್ವಕಪ್‌ಗೆ ಆಯ್ಕೆಯಾಗದಿರಬಹುದು.
ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಇದು ಕೊನೆಯ ಟಿ20 ವಿಶ್ವಕಪ್ ಎಂಬುದು ಭಾಗಶಃ ಸತ್ಯ. ಏಕೆಂದರೆ ರೋಹಿತ್ ಕೂಡ ಈ ಚುಟುಕು ಮಾದರಿಯಿಂದ ಈಗಾಗಲೇ ದೂರ ಸರಿದಿದ್ದಾರೆ.
ರೋಹಿತ್ 2007 ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಆಡಿದ್ದರು. ಆದರೀಗ ವಯಸ್ಸು ಹಾಗೂ ಕಿರಿಯ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿ ರೋಹಿತ್ ಈ ಮಾದರಿಯಿಂದ ಹಿಂದೆ ಸರಿಯಬಹುದು.
ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೂ ಇದು ಕೊನೆಯ ಟಿ20 ವಿಶ್ವಕಪ್ ಆಗಿದೆ. ಕೊಹ್ಲಿ ಫಿಟ್ ಆಗಿದ್ದರೂ ಅವರ ಸ್ಟ್ರೈಕ್ ರೇಟ್ ಬಗ್ಗೆ ಪ್ರಶ್ನೆಗಳು ಎದ್ದಿವೆ. ಹೀಗಾಗಿ ಅವರೂ ಸಹ ಈ ಮಾದರಿಯಿಂದ ಹಿಂದೆ ಸರಿಯಹುದು.
9ನೇ ಆವೃತ್ತಿಯ ವಿಶ್ವಕಪ್ನಲ್ಲಿ ಭಾರತ ಜೂನ್ 5 ರಿಂದ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಆ ಬಳಿಕ ಜೂನ್ 9 ರಂದು ಪಾಕಿಸ್ತಾನದ ವಿರುದ್ಧ ಹೈವೋಲ್ಟೇಜ್ ಪಂದ್ಯ ನಡೆಯಲ್ಲಿದೆ.