2027 ವಿಶ್ವಕಪ್​ನಲ್ಲಿ ಆಡಲ್ಲ 2023 WC ಆಡಿದ ಈ 5 ಭಾರತೀಯರು

19 November 2023

2011 ರ ವಿಶ್ವಕಪ್ ವಿಜೇತ ವಿರಾಟ್ ಕೊಹ್ಲಿ 2 ವಿಶ್ವಕಪ್ ಫೈನಲ್‌ಗಳನ್ನು ಆಡಿದ ಅಪರೂಪದ ಭಾರತೀಯ ಆಟಗಾರ. ಆದರೆ, ಎರಡು ODI ವಿಶ್ವಕಪ್ ಗೆದ್ದ ಮೊದಲ ಭಾರತೀಯ ಆಗುವ ಅವಕಾಶ ಕಳೆದುಕೊಂಡರು.

ವಿರಾಟ್ ಕೊಹ್ಲಿ

2027 ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಬರುವ ವೇಳೆ ಕೊಹ್ಲಿಗೆ 38 ವರ್ಷ. ಅವರು ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಫಿಟ್ ಆಟಗಾರರಾಗಿದ್ದರೂ, ಇನ್ನೂ 4 ವರ್ಷಗಳ ಕಾಲ ಆಡುವುದು ಅನುಮಾನ.

ವಿರಾಟ್ ಕೊಹ್ಲಿ

ರೋಹಿತ್ ಶ್ರೇಷ್ಠ ನಾಯಕ ಹಾಗೂ ಬ್ಯಾಟರ್ ಎಂಬುದರಲ್ಲಿ ಎರಡು ಮಾತಿಲ್ಲ. 2011ರಲ್ಲಿ ತಂಡದಿಂದ ಹೊರಗುಳಿದ ನಂತರ ನಾಯಕನಾಗಿ ವಿಶ್ವಕಪ್ ಗೆಲ್ಲಲು ರೋಹಿತ್‌ ಸಾಕಷ್ಟು ಹೋರಾಡಿದರು.

ರೋಹಿತ್ ಶರ್ಮಾ

2027 ರ ವಿಶ್ವಕಪ್ ವೇಳೆಗೆ ರೋಹಿತ್ ಶರ್ಮಾಗೆ 40 ವರ್ಷ ವಯಸ್ಸಾಗುತ್ತದೆ. ಧೋನಿ ಮತ್ತು ಸಚಿನ್ 38 ನೇ ವಯಸ್ಸಿನಲ್ಲಿ ವಿಶ್ವಕಪ್‌ಗಳನ್ನು ಆಡಿದ್ದರು. ರೋಹಿತ್ 2027 ರಲ್ಲಿ ಆಡುವುದು ಅನುಮಾನ.

ರೋಹಿತ್ ಶರ್ಮಾ

2023ರ ವಿಶ್ವಕಪ್‌ನಲ್ಲಿ ಕೇವಲ ಒಂದು ಪಂದ್ಯವನ್ನು ಆಡಿದ ಅಶ್ವಿನ್ 2011 ರಲ್ಲೂ ಭಾರತ ಟ್ರೋಫಿಯನ್ನು ಗೆದ್ದ ತಂಡದಲ್ಲಿ ಇದ್ದರು.

ರವಿಚಂದ್ರನ್ ಅಶ್ವಿನ್

ಕಳೆದ ಕೆಲವು ವರ್ಷಗಳಿಂದ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅಶ್ವಿನ್ ಸ್ಥಾನ ಪಡೆಯುತ್ತಿಲ್ಲ. ಹೀಗಾಗಿ 37 ನೇ ವಯಸ್ಸಿನಲ್ಲಿ ಅವರು 2027ರ ವಿಶ್ವಕಪ್ ಆಡುವುದು ಅನುಮಾನ.

ಅಶ್ವಿನ್

ಶಮಿ ವಿಶ್ವಕಪ್ 2023ರ ಕೇವಲ 7 ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಕಬಳಿಸುವ ಮೂಲಕ ದಾಖಲೆ ಬರೆದರು. ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಕಿತ್ತ ಆಟಗಾರನಾದರು.

ಮೊಹಮ್ಮದ್ ಶಮಿ

ಶಮಿ ಎಂದಿಗೂ ODI ವಿಶ್ವಕಪ್ ಗೆದ್ದಿಲ್ಲ. 2027 ರ ಆವೃತ್ತಿ ಬಂದಾಗ ಅವರಿಗೆ 37 ವರ್ಷ ವಯಸ್ಸಿನವರಾಗುತ್ತದೆ. ಆಗ ಇವರಿಗೆ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ.

ಮೊಹಮ್ಮದ್ ಶಮಿ

ಜಡೇಜಾ 16 ವಿಕೆಟ್‌ಗಳೊಂದಿಗೆ ತಮ್ಮ ವಿಶ್ವಕಪ್ ಅಭಿಯಾನವನ್ನು ಕೊನೆಗೊಳಿಸಿದರು. ಜಡೇಜಾ 2011ರಲ್ಲಿ ತಂಡದಿಂದ ಹೊರಗುಳಿದಿದ್ದರು. ಆದರೆ 2015, 2019, ಮತ್ತು 2023ರಲ್ಲಿ ಆಡಿದ್ದಾರೆ.

ರವೀಂದ್ರ ಜಡೇಜಾ

ಜಡೇಜಾ ಇನ್ನೂ ODI ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೆ 2027 ರ ವಿಶ್ವಕಪ್ ಸಮಯದಲ್ಲಿ 38 ವರ್ಷ ವಯಸ್ಸಾಗಿರುತ್ತದೆ. ಆ ಸಮಯದಲ್ಲಿ ಇವರು ತಂಡದಲ್ಲಿ ಇರುವುದು ಅನುಮಾನ.

ರವೀಂದ್ರ ಜಡೇಜಾ

ಗೆದ್ದರೂ ಆಸ್ಟ್ರೇಲಿಯಾಕ್ಕೆ ಸಿಗಲಿಲ್ಲ ಈ ಟ್ರೋಫಿ: ಯಾಕೆ ಗೊತ್ತೇ?