ಸಚಿನ್ ವಿಶ್ವದಾಖಲೆ ಮುರಿಯಲು ಸಜ್ಜಾದ ಕಿಂಗ್ ಕೊಹ್ಲಿ
19 Oct 2023
Pic credit - Google
ಐಸಿಸಿ ಏಕದಿನ ವಿಶ್ವಕಪ್'ನಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿ ಆಗಲಿದೆ.
ಭಾರತ-ಬಾಂಗ್ಲಾ
ಬಾಂಗ್ಲಾ ವಿರುದ್ಧದ ಈ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣಿದ್ದು, ನೂತನ ದಾಖಲೆ ನಿರ್ಮಿಸುವ ತವಕದಲ್ಲಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಅವರು ಲೆಜೆಂಡರಿ ಸಚಿನ್ ತೆಂಡೂಲ್ಕರ್ ಅವರು ನಿರ್ಮಿಸಿದ ವಿಶ್ವ ದಾಖಲೆಯನ್ನು ಮುರಿಯಲು ಸಜ್ಜಾಗಿದ್ದಾರೆ.
ಸಚಿನ್ vs ಕೊಹ್ಲಿ
ಕೊಹ್ಲಿ ಭಾರತ ಪರ ಒಟ್ಟು 510 ಪಂದ್ಯಗಳನ್ನು ಆಡಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ಗಿಂತ ಮೊದಲು ಅತಿ ವೇಗವಾಗಿ 26,000 ರನ್ ಪೂರೈಸಲು 77 ರನ್ ಅಗತ್ಯವಿದೆ.
77 ರನ್
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 3 ಬ್ಯಾಟರ್ಸ್ ಮಾತ್ರ 26,000+ ರನ್ ಗಳಿಸಿದ್ದಾರೆ. ಸಚಿನ್ (34,357 ರನ್), ಸಂಗಕ್ಕಾರ (28,016 ರನ್) ಮತ್ತು ಪಾಂಟಿಂಗ್ (27,483 ರನ್).
3 ಬ್ಯಾಟರ್ಸ್
ಸದ್ಯಕ್ಕೆ, ಭಾರತದ ಮಾಜಿ ನಾಯಕ ವಿರಾಟ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಐದನೇ ಬ್ಯಾಟರ್ ಆಗಿದ್ದಾರೆ.
5ನೇ ಸ್ಥಾನ
ಶುಭ್ಮನ್ ಗಿಲ್ ಮುಂದಿನ 3 ಇನ್ನಿಂಗ್ಸ್‌ಗಳಲ್ಲಿ 67 ರನ್ ಗಳಿಸಿದರೆ ಅತ್ಯಂತ ವೇಗವಾಗಿ 2,000 ಏಕದಿನ ರನ್ ಗಳಿಸಿದ ಬ್ಯಾಟರ್ ಎಂಬ ಸಾಧನೆ ಮಾಡಲಿದ್ದಾರೆ.
ಗಿಲ್ ದಾಖಲೆ
ಇಂದು ನಡೆಯಲಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಣ ವಿಶ್ವಕಪ್ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.
2ಗಂಟೆಗೆ
ಎರಡು ಬದಲಾವಣೆ: ಭಾರತದ ಪ್ಲೇಯಿಂಗ್ XI ಇಲ್ಲಿದೆ
ಇನ್ನಷ್ಟು ಓದಿ