ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಕೊಹ್ಲಿ
30 June 2024
Pic credit - BCCI
Author :
ಪೃಥ್ವಿಶಂಕರ
Pic credit - BCCI
ಶನಿವಾರ ಬಾರ್ಬಡೋಸ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಟಿ20 ವಿಶ್ವಕಪ್ 2024 ಪ್ರಶಸ್ತಿಯನ್ನು ವಶಪಡಿಸಿಕೊಂಡಿದೆ.
ಭಾರತ ಚಾಂಪಿಯನ್
Pic credit - BCCI
ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಮಿಂಚಿದ ಕೊಹ್ಲಿ 59 ಎಸೆತಗಳಲ್ಲಿ 76 ರನ್ ಸಿಡಿಸುವ ಮೂಲಕ ಭಾರತದ ಸ್ಕೋರ್ ಅನ್ನು 170ಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಗೆಲುವಿನ ರೂವಾರಿ
Pic credit - BCCI
ಈ ಸಂದರ್ಭದಲ್ಲಿ ಕಿಂಗ್ ಕೊಹ್ಲಿ 128.81 ಸ್ಟ್ರೈಕ್ ರೇಟ್‌ನಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು
ಅರ್ಧಶತಕ
Pic credit - BCCI
ಇದರೊಂದಿಗೆ ಕೊಹ್ಲಿ ಈ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಮೂಲಕ ಈ ಪ್ರಶಸ್ತಿಯನ್ನು ಅಧಿಕ ಬಾರಿ ಪಡೆದ ಮೊದಲ ಆಟಗಾರ ಎನಿಸಿಕೊಂಡರು.
ಪಂದ್ಯ ಶ್ರೇಷ್ಠ
Pic credit - BCCI
ಇದು 125 ನೇ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ ಅವರ 16 ನೇ ಪಂದ್ಯದ ಆಟಗಾರ ಪ್ರಶಸ್ತಿಯಾಗಿದೆ.
ವಿರಾಟ್ ಕೊಹ್ಲಿ
Pic credit - BCCI
15 ಬಾರಿ ಈ ಪ್ರಶಸ್ತಿ ಗೆದ್ದಿರುವ ಸೂರ್ಯಕುಮಾರ್ ಯಾದವ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಸೂರ್ಯಕುಮಾರ್
Pic credit - BCCI
159 ಪಂದ್ಯಗಳಲ್ಲಿ 14 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ.
ರೋಹಿತ್ ಶರ್ಮಾ
ನಿವೃತ್ತಿಯ ನಂತರ ರೋಹಿತ್-ವಿರಾಟ್ಗೆ ಸಿಗುವ ಪಿಂಚಣಿ ಎಷ್ಟು ಗೊತ್ತಾ?