ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ ಅತಿ ಕಿರಿಯ ಬ್ಯಾಟರ್‌ಗಳು ಯಾರು ಗೊತ್ತೇ?
03-February-2024
Author: Vinay Bhat
ದಕ್ಷಿಣ ಆಫ್ರಿಕಾದ ಜಾಕ್ವೆಸ್ ರುಡಾಲ್ಫ್ 21 ವರ್ಷ ಮತ್ತು 355 ದಿನಗಳ ವಯಸ್ಸಿನಲ್ಲಿ ದ್ವಿಶತಕ ಗಳಿಸಿದರು. 2002 ರಲ್ಲಿ ಬಾಂಗ್ಲಾದೇಶದ ವಿರುದ್ಧ 222* ರನ್ ಗಳಿಸಿದರು.
ಜಾಕ್ವೆಸ್ ರುಡಾಲ್ಫ್
ದಂತಕಥೆ ಡಾನ್ ಬ್ರಾಡ್ಮನ್ 21 ವರ್ಷ ಮತ್ತು 304 ದಿನಗಳಲ್ಲಿ ದ್ವಿಶತಕ ಗಳಿಸಿದರು. ಅವರು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 254 ರನ್ ಗಳಿಸಿದರು.
ಡಾನ್ ಬ್ರಾಡ್ಮನ್
ವೆಸ್ಟ್ ಇಂಡೀಸ್ ನಾಯಕ ಕ್ರೇಗ್ ಬ್ರಾಥ್‌ವೈಟ್ 21 ವರ್ಷ 278 ದಿನಗಳಲ್ಲಿ ದ್ವಿಶತಕ ಗಳಿಸಿದರು. ಅವರು ಕಿಂಗ್‌ಸ್ಟೌನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ 212 ರನ್ ಸಿಡಿಸಿದರು.
ಕ್ರೈಗ್ ಬ್ರಾಥ್‌ವೈಟ್
ಗವಾಸ್ಕರ್ 21 ವರ್ಷ 277 ದಿನಗಳ ವಯಸ್ಸಿನಲ್ಲಿ ಚೊಚ್ಚಲ ದ್ವಿಶತಕ ದಾಖಲಿಸಿದರು. ಅವರು ವೆಸ್ಟ್ ಇಂಡೀಸ್ ವಿರುದ್ಧ 220 ರನ್ ಗಳಿಸಿದರು.
ಸುನಿಲ್ ಗವಾಸ್ಕರ್
ಮಹೇಲಾ ಜಯವರ್ಧನೆ 21 ವರ್ಷ 273 ದಿನಗಳಲ್ಲಿ ದ್ವಿಶತಕ ಗಳಿಸಿದರು. ಅವರು ಕೊಲಂಬೊದಲ್ಲಿ ಭಾರತ ವಿರುದ್ಧ 242 ರನ್ ಮಾಡಿದರು.
ಮಹೇಲ ಜಯವರ್ಧನೆ
ಸ್ಮಿತ್ 21 ವರ್ಷ ಮತ್ತು 259 ದಿನಗಳ ವಯಸ್ಸಿನಲ್ಲಿ ತಮ್ಮ ಮೊದಲ ದ್ವಿಶತಕವನ್ನು ಗಳಿಸಿದರು. ಅವರು ಲಂಡನ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 200 ರನ್ ಗಳಿಸಿದರು.
ಗ್ರೇಮ್ ಸ್ಮಿತ್
ಸೋಬರ್ಸ್ ಕಿಂಗ್‌ಸ್ಟನ್‌ನಲ್ಲಿ ಪಾಕಿಸ್ತಾನ ವಿರುದ್ಧ 365* ರನ್ ಗಳಿಸಿದರು. ಅವರ ಮೊದಲ ಡಬಲ್ ಟನ್ ಕೇವಲ 21 ವರ್ಷ 213 ದಿನಗಳಲ್ಲಿ ಬಂತು.
ಗ್ಯಾರಿ ಸೋಬರ್ಸ್
ಭಾರತದ ಬ್ಯಾಟರ್ ವಿನೋದ್ ಕಾಂಬ್ಳಿ 21 ವರ್ಷ 32 ದಿನಗಳ ವಯಸ್ಸಿನಲ್ಲಿ ಚೊಚ್ಚಲ ದ್ವಿಶತಕ ಗಳಿಸಿದರು. ಇಂಗ್ಲೆಂಡ್ ವಿರುದ್ಧ 224 ರನ್ ಮಾಡಿದರು.
ವಿನೋದ್ ಕಾಂಬ್ಳಿ
ಹೆಡ್ಲಿ 20 ವರ್ಷ ಮತ್ತು 308 ದಿನಗಳಲ್ಲಿ ತಮ್ಮ ಮೊದಲ ದ್ವಿಶತಕವನ್ನು ಗಳಿಸಿದರು. ಅವರು ಕಿಂಗ್‌ಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ 223 ರನ್ ಗಳಿಸಿದರು.
GA ಹೆಡ್ಲಿ
ಪಾಕಿಸ್ತಾನದ ದಂತಕಥೆ ಜಾವೇದ್ ಮಿಯಾಂದಾದ್ ಅವರು ಟೆಸ್ಟ್‌ನಲ್ಲಿ ಚೊಚ್ಚಲ ದ್ವಿಶತಕ ಗಳಿಸಿದಾಗ ಅವರಿಗೆ ಕೇವಲ 19 ವರ್ಷ ಮತ್ತು 140 ದಿನ.
ಮಿಯಾಂದಾದ್
ಪಂದ್ಯ ಮುಗಿಯುತ್ತಿದ್ದಂತೆ ಜಗಳ, ಅಂಪೈರ್ ಜೊತೆ ವಾಗ್ವಾದಕ್ಕಿಳಿದ ಅಶ್ವಿನ್