Hardik Pandya (2)

GT ತೊರೆದ ಹಾರ್ದಿಕ್: ಗುಜರಾತ್ ನೂತನ ನಾಯಕ ಯಾರು ಗೊತ್ತೇ?

25-November-2023

Hardik Pandya (1)

ಮಾಧ್ಯಮ ವರದಿಗಳ ಪ್ರಕಾರ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತೊರೆದು ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡಲಿದ್ದಾರಂತೆ.

ಮುಂಬೈಗೆ ಹಾರ್ದಿಕ್?

Hardik Pandya (3)

ಹಾರ್ದಿಕ್ ಪಾಂಡ್ಯ ಗುಜರಾತ್ ತಂಡವನ್ನು ಐಪಿಎಲ್‌ನಲ್ಲಿ ಎರಡು ಸೀಸನ್ ಮುನ್ನಡೆಸಿದ್ದಾರೆ. ಹಾರ್ದಿಕ್ ತೊರೆದ ಕಾರಣ ಇದೀಗ ಜಿಟಿ ನಾಯಕ ಯಾರು ಆಗಬಹುದು ಎಂಬುದನ್ನು ನೋಡೋಣ.

ನೂತನ ನಾಯಕ

Gill (2)

ಹಾರ್ದಿಕ್ ಪಾಂಡ್ಯ ಗುಜರಾತ್ ತೊರೆದರೆ ನೂತನ ನಾಯಕನಾಗಿ ಮುನ್ನಲೆಗೆ ಬರುವ ಮೊದಲ ಹೆಸರು ಶುಭ್'ಮನ್ ಗಿಲ್.

ಶುಭ್​ಮನ್ ಗಿಲ್

ಗಿಲ್ ಜಿಟಿ ಪರ ಐಪಿಎಲ್ 2023 ರಲ್ಲಿ ಮೂರು ಶತಕಗಳು ಮತ್ತು ನಾಲ್ಕು ಅರ್ಧ ಶತಕಗಳನ್ನು ಒಳಗೊಂಡಂತೆ 17 ಪಂದ್ಯಗಳಲ್ಲಿ 59.33 ರ ಸರಾಸರಿಯಲ್ಲಿ 890 ರನ್ ಗಳಿಸಿದ್ದಾರೆ.

ಗಿಲ್ ಪ್ರದರ್ಶನ

ನಾಯಕನ ಸ್ಥಾನಕ್ಕೆ ಕೇನ್ ವಿಲಿಯಮ್ಸನ್ ಅವರ ಹೆಸರನ್ನು ಸಹ ಪರಿಗಣಿಸಬಹುದು. ಕಳೆದ ಬಾರಿ ಕೇನ್ ಇಂಜುರಿಯಿಂದ ಹೆಚ್ಚು ಪಂದ್ಯಗಳನ್ನು ಆಡಲಿಲ್ಲ.

ಕೇನ್ ವಿಲಿಯಮ್ಸನ್

ಕೇನ್'ಗೆ ನಾಯಕನ ಗುಣವಿದೆ. ನ್ಯೂಝಿಲೆಂಡ್ ತಂಡದ ನಾಯಕನಾಗಿ ಅನುಭವವಿದೆ. ಈ ಹಿಂದೆ ಎಸ್‌ಆರ್‌ಹೆಚ್ ಟೀಮ್ ಅನ್ನು ಕೂಡ ಮುನ್ನಡೆಸಿದ್ದರು.

ನಾಯಕನ ಅನುಭವ

ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಕೂಡ ನಾಯಕತ್ವಕ್ಕೆ ಉತ್ತಮ ಆಯ್ಕೆಯಾಗಿದ್ದಾರೆ. ರಶೀದ್ ಈ ಹಿಂದೆ ಅಫ್ಘಾನಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದರು.

ರಶೀದ್ ಖಾನ್

ಜಿಟಿ ರಶೀದ್ ಖಾನ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿಲ್ಲ, ಹೀಗಾಗಿ ಅವರನ್ನು ಜಿಟಿ ನಾಯಕನಾಗಿ ಹಾರ್ದಿಕ್ ಪಾಂಡ್ಯ ಬದಲಿಗೆ ಪರಿಗಣಿಸಬಹುದು.

ರಶೀದ್ ಖಾನ್