ಇಂಜುರಿಯಿಂದ ಬಳಲುತ್ತಿರುವ ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಕಾಲಿಗೆ ಗಾಯ
ಭಾರತದ 4ನೇ ಪಂದ್ಯದಲ್ಲಿ ಹಾರ್ದಿಕ್ ಬಾಂಗ್ಲಾದೇಶ ವಿರುದ್ಧ ಬೌಲಿಂಗ್ ಮಾಡುವಾಗ, ಸ್ಟ್ರೈಟ್ ಡ್ರೈವ್ ಅನ್ನು ನಿಲ್ಲಿಸಲು ಪ್ರಯತ್ನಿಸುವ ಬರದಲ್ಲಿ ಎಡಗಾಲಿನ ನೋವಿಗೆ ತುತ್ತಾದರು.
ಎನ್ಸಿಎನಲ್ಲಿ ಚಿಕಿತ್ಸೆ
ಹಾರ್ದಿಕ್ ಅವರು ಚಿಕಿತ್ಸೆಗಾಗಿ ಬೆಂಗಳೂರಿನ NCAಗೆ ತೆರಳಿದ್ದರು. ಇವರ ಕಾಲಿನಲ್ಲಿ ಯಾವುದೇ ಒತ್ತಡ ಅಥವಾ ಮುರಿತ ಕಂಡುಬರದಿದ್ದರೂ, ಕೆಲವು ದಿನಗಳ ಕಾಲ ವಿಶ್ರಾಂತಿ ಸೂಚಿಸಲಾಗಿತ್ತು.
ವಿಶ್ವಕಪ್ನಿಂದ ಔಟ್
ಪಾಂಡ್ಯ ಆದಷ್ಟು ಬೇಗ ತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ಅನಿರೀಕ್ಷಿತ ಎಂಬಂತೆ ದಿಢೀರ್ ಆಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ತೀವ್ರವಾದ ಗಾಯ
ಪಾಂಡ್ಯ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಂಡಿಲ್ಲ. ಆರಂಭದಲ್ಲಿ ಸಾಮಾನ್ಯ ಗಾಯ ಎಂದು ಭಾವಿಸಲಾಗಿತ್ತಾದರೂ ಬಳಿಕ ಗಾಯದ ತೀವ್ರತೆ ಹೆಚ್ಚಾಗಿದೆ. ಹೀಗಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಭಾರತಕ್ಕೆ ಹಿನ್ನಡೆ
ಬ್ಯಾಟಿಂಗ್-ಬೌಲಿಂಗ್‌ನಲ್ಲಿ ತಂಡಕ್ಕೆ ಆಧಾರವಾಗಿದ್ದ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿ ಮುಂಬರುವ ಮಹತ್ವದ ಪಂದ್ಯದಲ್ಲಿ ಭಾರತಕ್ಕೆ ಕಾಡುವುದು ಖಚಿತ.
ಪ್ರಸಿದ್ಧ್ ಕೃಷ್ಣ
ಹಾರ್ದಿಕ್ ಪಾಂಡ್ಯ ಅವರ ಜಾಗಕ್ಕೆ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ಬದಲಿ ಆಟಗಾರನಾಗಿ ಬಿಸಿಸಿಐ ಆಯ್ಕೆ ಮಾಡಿದೆ.
ಭಾರತ-ಆಫ್ರಿಕಾ
ವಿಶ್ವಕಪ್ನಲ್ಲಿ ಭಾನುವಾರ ಭಾರತ- ಆಫ್ರಿಕಾ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಯೋಜಿಸಲಾಗಿದೆ.
ಭಾರತದಲ್ಲಿ ಬಾಬರ್ ಮದುವೆ ಶಾಪಿಂಗ್: ಪಾಕ್ ಫ್ಯಾನ್ಸ್ ಕೆಂಡಾಮಂಡಲ