ಕಿಂಗ್ ಕೊಹ್ಲಿ ದಾಖಲೆ ಪುಡಿಗಟ್ಟಲು ಸಜ್ಜಾದ ಯಶಸ್ವಿ ಜೈಸ್ವಾಲ್

03-March-2024

Author: Vinay Bhat

ಭಾರತ ಮತ್ತು ಇಂಗ್ಲೆಂಡ್ ನಡುವಿನ 4 ಟೆಸ್ಟ್ ಪಂದ್ಯಗಳು ಪೂರ್ಣಗೊಂಡಿದ್ದು, ಈಗ ಕೊನೆಯ ಐದನೇ ಪಂದ್ಯವು ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ನಡೆಯಲಿದೆ.

ಭಾರತ-ಇಂಗ್ಲೆಂಡ್

ಟೀಮ್ ಇಂಡಿಯಾ ಈಗಾಗಲೇ 3-1 ಅಂಕಗಳ ಅಂತರದಿಂದ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ಕೊನೆಯ ಪಂದ್ಯವನ್ನು ಕೂಡ ಗೆಲ್ಲುವ ಪ್ಲಾನ್​ನಲ್ಲಿದೆ ರೋಹಿತ್ ಪಡೆ.

ಸರಣಿ ಕೈವಶ

ಈ ಟೆಸ್ಟ್ ಸರಣಿಯಲ್ಲಿ ಅನೇಕ ದಾಖಲೆ ಸೃಷ್ಟಿಸಿರುವ ಟೀಮ್ ಇಂಡಿಯಾದ ಯಂಗ್ ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಈ ಪಂದ್ಯದಲ್ಲೂ ಕೂಡ ಸಾಧನೆ ಮಾಡಲು ಹೊರಟಿದ್ದಾರೆ.

ಯಶಸ್ವಿ ಜೈಸ್ವಾಲ್

ಹೌದು, ಈಗಾಗಲೇ ಈ ಟೆಸ್ಟ್ ಸರಣಿಯಲ್ಲಿ ಸತತ ಎರಡು ದ್ವಿಶತಕ ಸಿಡಿಸಿರುವ ಜೈಸ್ವಾಲ್, ಇನ್ನಷ್ಟು ದಾಖಲೆಗಳನ್ನು ತಮ್ಮ ಹೆಸರಲ್ಲಿ ಬರೆಯಲಿದ್ದಾರೆ. ಇದಕ್ಕಾಗಿ ಕೇವಲ 1 ರನ್ ಅಗತ್ಯವಿದೆ.

ಕೇವಲ 1 ರನ್

ಐದನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 1 ರನ್ ಪೂರೈಸಿದ ತಕ್ಷಣ ಟೀಮ್ ಇಂಡಿಯಾದ ದಿಗ್ಗಜ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿಯಲಿದ್ದಾರೆ ಎಂಬುದು ವಿಶೇಷ.

ಕೊಹ್ಲಿ ದಾಖಲೆ

ಇದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ದಾಖಲೆಯಾಗಿದೆ. ಈವರೆಗೆ ವಿರಾಟ್ ಕೊಹ್ಲಿ (2018 ರಲ್ಲಿ 655 ರನ್) ಮತ್ತು ಜೈಸ್ವಾಲ್ (655 ರನ್) ಸಮಬಲದಲ್ಲಿದ್ದಾರೆ.

ಅತಿ ಹೆಚ್ಚು ರನ್

ಹಾಗೆಯೆ ಈ ಟೆಸ್ಟ್‌ನಲ್ಲಿ ಜೈಸ್ವಾಲ್ 120 ರನ್ ಗಳಿಸಿದರೆ, ಅವರು ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸುನಿಲ್ ಗವಾಸ್ಕರ್ ಅವರ (774) ದಾಖಲೆಯನ್ನು ಮುರಿಯುತ್ತಾರೆ.

120 ರನ್