ಸ್ಫೋಟಕ ಬ್ಯಾಟರ್ ಸಿಖಂದರ್ ರಾಝಾ ಕ್ರಿಕೆಟ್'ನಿಂದ ಬ್ಯಾನ್
10 December 2023
Author: Vinay Bhat
ಎರಡು ದಿನಗಳ ಹಿಂದೆ ಐರ್ಲೆಂಡ್ ವಿರುದ್ಧದ ರೋಚಕ ಪಂದ್ಯದಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದ ಜಿಂಬಾಬ್ವೆ ನಾಯಕ ಸಿಖಂದರ್ ರಾಝಾರನ್ನು ಐಸಿಸಿ ನಿಷೇಧಿಸಿದೆ.
ಸಿಖಂದರ್ ರಾಝಾ
ಮೊದಲ ಟಿ20 ಪಂದ್ಯದಲ್ಲಿ ರಾಝಾ ಅವರು ತಮ್ಮ ನಡವಳಿಕೆಯಿಂದ ಶಿಕ್ಷೆಗೆ ಒಳಗಾಗಿದ್ದು, ಇದೀಗ ಈ ಸರಣಿಯ ಉಳಿದ 2 ಪಂದ್ಯಗಳಿಂದ ಬ್ಯಾನ್ ಆಗಿದ್ದಾರೆ.
ಐಸಿಸಿ ನಿಷೇಧ
ಮೊದಲ T20 ಪಂದ್ಯದಲ್ಲಿ ರನ್ ಚೇಸ್ ಮಾಡುವಾಗ, 14ನೇ ಓವರ್‌ನಲ್ಲಿ ಐರಿಶ್ ಬೌಲರ್‌ಗಳಾದ ಜೋಶ್ ಲಿಟಲ್ ಮತ್ತು ಕರ್ಟಿಸ್ ಕ್ಯಾಂಪರ್ ಅವರೊಂದಿಗೆ ರಾಝಾ ವಾಗ್ವಾದ ನಡೆಸಿದ್ದಾರೆ.
ಮೈದಾನದಲ್ಲಿ ವಾದ
ರಾಝಾ ರನ್‌ಗಾಗಿ ಓಡುವಾಗ, ಜೋಶ್ ಲಿಟಲ್ ಅವರ ಮುಂದೆಯೇ ನಿಂತಿದ್ದರು. ಬೌಲರ್‌ನಿಂದ ತಪ್ಪಿಸಿಕೊಂಡು ರಾಝಾ ರನ್ ಪೂರ್ಣಗೊಳಿಸಿದರು. ಆದರೆ ನಂತರ ಗಲಾಟೆ ನಡೆದಿದೆ.
ರಾಝಾ-ಲಿಟಲ್
ಗಲಾಟೆ ಜೋರಾಗಿ ಸಿಖಂದರ್ ರಾಝಾ ಇಬ್ಬರೂ ಬೌಲರ್‌ಗಳಿಗೆ ಬ್ಯಾಟ್ ತೋರಿಸಿದರು. ಅಷ್ಟೇ ಅಲ್ಲ, ಅಂಪೈರ್ ಮಧ್ಯಪ್ರವೇಶಿಸಲು ಮುಂದಾದಾಗ, ಅವರ ಮಾತನ್ನು ಕೇಳಿಲ್ಲ.
ಅಂಪೈರ್ ಮಾತೂ ಕೇಳಿಲ್ಲ
ಈ ಕೃತ್ಯಕ್ಕಾಗಿ ರಾಝಾ ಅವರ ಪಂದ್ಯದ ಶುಲ್ಕದ ಶೇ. 50 ರಷ್ಟು ದಂಡ ವಿಧಿಸಲಾಯಿತು. ಅಲ್ಲದೆ 2 ಡಿಮೆರಿಟ್ ಅಂಕ ಪಡೆದಿದ್ದಾರೆ.
ಜೇಬಿಗೂ ಕತ್ತರಿ
ರಾಝಾ ಅವರ ಖಾತೆಯಲ್ಲಿ ಈ ಮೊದಲು 2 ಅಂಕಗಳಿದ್ದು, ಇದೀಗ ಒಟ್ಟು 4 ಅಂಕಗಳನ್ನು ಹೊಂದಿರುವ ಕಾರಣ, ಅವರನ್ನು 2 ಪಂದ್ಯಗಳಿಂದ ನಿಷೇಧಿಸಲಾಗಿದೆ.
4 ಅಂಕ
ಐರ್ಲೆಂಡ್‌ನ ಬೌಲರ್‌ಗಳಾದ ಜೋಶ್ ಲಿಟಲ್ ಮತ್ತು ಕ್ಯಾಂಫರ್ ಅವರಿಗೆ ಪಂದ್ಯದ ಶುಲ್ಕ 15% ದಂಡ ಮತ್ತು ತಲಾ 1 ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
ಐರಿಶ್ ಆಟಗಾರ
ಭಾರತ-ಆಫ್ರಿಕಾ 1st ಟಿ20ಗೆ ವರುಣನ ಕಾಟ: ಎಷ್ಟು ಗಂಟೆಗೆ ಮಳೆ ಬರಲಿದೆ?