10-09-2023

ಸಚಿನ್ ತೆಂಡೂಲ್ಕರ್ ದಾಖಲೆ ಪುಡಿಗಟ್ಟಿದ ಡೇವಿಡ್ ವಾರ್ನರ್

ವಾರ್ನರ್ ದಾಖಲೆ

ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಸಚಿನ್ ದಾಖಲೆ ಉಡೀಸ್

ಡೇವಿಡ್ ವಾರ್ನರ್ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು ವಿಶೇಷ ಸಾಧನೆ ಗೈದಿದ್ದಾರೆ.

ವಾರ್ನರ್ ಶತಕ

ಆಸೀಸ್ ಪರ ಆರಂಭಿಕನಾಗಿ ಕಣಕ್ಕಿಳಿದ ವಾರ್ನರ್ 93 ಎಸೆತಗಳಲ್ಲಿ 106 ರನ್ ಬಾರಿಸಿ ಅಬ್ಬರಿಸಿದ್ದರು. ಈ ಶತಕ ನೂತನ ದಾಖಲೆಗೆ ಕಾರಣವಾಯಿತು.

ಅತ್ಯಧಿಕ ಶತಕ

ಈ ಶತಕದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟಿನಲ್ಲಿ ಅತ್ಯಧಿಕ ಶತಕ ಸಿಡಿಸಿದ ಆರಂಭಿಕ ಆಟಗಾರ ವಾರ್ನರ್ ಆದರು. ಈ ಹಿಂದೆ ಇದು ಸಚಿನ್ ಹೆಸರಿನಲ್ಲಿತ್ತು.

ಸಚಿನ್ 45 ಶತಕ

ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ ಕ್ರಿಕೆಟಿನಲ್ಲಿ ಆರಂಭಿಕನಾಗಿ ಒಟ್ಟು 45 ಶತಕಗಳನ್ನು ಬಾರಿಸಿದ್ದರು. ಇದೀಗ ಈ ವಿಶ್ವ ದಾಖಲೆಯನ್ನು ವಾರ್ನರ್ ಮುರಿದಿದ್ದಾರೆ.

ವಾರ್ನರ್ 46 ಶತಕ

ವಾರ್ನರ್ ಅಂತರರಾಷ್ಟ್ರೀಯ ಕ್ರಿಕೆಟಿನಲ್ಲಿ ಆರಂಭಿಕನಾಗಿ ಒಟ್ಟು 46 ಶತಕಗಳನ್ನು ಬಾರಿಸಿದ್ದಾರೆ. 20 ಏಕದಿನ ಶತಕ, 25 ಟೆಸ್ಟ್ ಶತಕ, 1 ಟಿ20 ಶತಕ ಸೇರಿದೆ.

ಗೇಲ್ ಮೂರನೇ ಸ್ಥಾನ

ವಾರ್ನರ್, ಸಚಿನ್ ಅಲ್ಲದೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್'ನ ಕ್ರಿಸ್ ಗೇಲ್ ಇದ್ದಾರೆ. ಗೇಲ್ ಆರಂಭಿಕನಾಗಿ ಒಟ್ಟು 42 ಶತಕ ಬಾರಿಸಿದ್ದಾರೆ.

IND vs PAK ಹೈವೋಲ್ಟೇಜ್ ಪಂದ್ಯಕ್ಕೆ ಸಜ್ಜಾದ ಪ್ರೇಮದಾಸ