IND vs PAK ಹೈವೋಲ್ಟೇಜ್ ಪಂದ್ಯಕ್ಕೆ ಸಜ್ಜಾದ ಪ್ರೇಮದಾಸ
10-09-2023
ಏಷ್ಯಾಕಪ್ 2023ರಲ್ಲಿ ಇಂದು ನಡೆಯಲಿರುವ ಸೂಪರ್-4 ಹಂತದ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿದೆ.
ಭಾರತ-ಪಾಕ್ ಮುಖಾಮುಖಿ
ಕೊಲಂಬೊದ ಆರ್. ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಂ ಈ ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗಿ ನಿಂತಿದೆ.
ಪಂದ್ಯ ಎಲ್ಲಿ?
ಈ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಪಂದ್ಯ ಸಾಗಿದಂತೆ ಟ್ರ್ಯಾಕ್ ನಿಧಾನವಾಗುತ್ತದೆ, ಆಗ ಬ್ಯಾಟರ್‌ಗಳಿಗೆ ರನ್ ಗಳಿಸಲು ಕಷ್ಟವಾಗುತ್ತದೆ.
ಪಿಚ್ ಹೇಗಿದೆ?
ಈ ಮೈದಾನದಲ್ಲಿ ಭಾರತ ಉತ್ತಮ ದಾಖಲೆ ಹೊಂದಿದೆ. ತನ್ನ ಕೊನೆಯ 8 ಪಂದ್ಯಗಳಲ್ಲಿ 7 ಗೆದ್ದಿದೆ. ಪಾಕ್ ಈ ಮೈದಾನದಲ್ಲಿ ಕೊನೆಯ 4 ಪಂದ್ಯಗಳಲ್ಲಿ 2 ಗೆದ್ದಿದೆಯಷ್ಟೆ.
ಭಾರತ ಮೇಲುಗೈ
ಇಂಡೋ-ಪಾಕ್ ಕದನದ ವೇಳೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ವರದಿಯ ಪ್ರಕಾರ, ಸೆಪ್ಟೆಂಬರ್ 10 ರಂದು ಕೊಲಂಬೊದಲ್ಲಿ ಶೇ. 70 ರಷ್ಟು ಮಳೆಯಾಗುವ ಸಾಧ್ಯತೆಯಿದೆ.
ಹವಾಮಾನ ವರದಿ
ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ನಾಳೆ (ಸೆ. 11) ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಸೂಪರ್-4ರಲ್ಲಿ ಈ ಭಾರತ-ಪಾಕ್ ಪಂದ್ಯಕ್ಕೆ ಮೀಸಲು ದಿನ ಇರಿಸಲಾಗಿದೆ.
ಮೀಸಲು ದಿನ
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದೆ. 2.30ಕ್ಕೆ ಪಂದ್ಯದ ಟಾಸ್ ಪ್ರಕ್ರಿಯೆ ನಡೆಯಲಿದೆ.
ಪಂದ್ಯ ಎಷ್ಟು ಗಂಟೆಗೆ?
ಪ್ರೇಮದಾಸ ಮೈದಾನದಲ್ಲಿ ಯಾರ ಬ್ಯಾಟ್ ಹೆಚ್ಚು ಸದ್ದು ಮಾಡಿದೆ ಗೊತ್ತಾ?
ಇದನ್ನೂ ಓದಿ