ತಾಯಿ ಆಗಲಿರುವ ದೀಪಿಕಾ ಧರಿಸಿರುವ ಈ ಸುಂದರ ಉಡುಗೆಯ ಬೆಲೆ ಎಷ್ಟು ಲಕ್ಷ?

09 AUG 2024

 Manjunatha

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ತಾಯಿಯಾಗುತ್ತಿದ್ದಾರೆ. ತಾಯಿಯಾಗಲಿರುವ ದೀಪಿಕಾ ಸಿನಿಮಾಗಳಿಂದ ಬಿಡುವು ಪಡೆದಿದ್ದಾರೆ.

    ದೀಪಿಕಾ ಪಡುಕೋಣೆ

ತಾಯಿ ಆಗಲಿರುವುದಾಗಿ ಘೋಷಣೆ ಮಾಡಿದ ಬಳಿಕ ಅಂಬಾನಿ ಮದುವೆಯಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಹೆಚ್ಚಾಗೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ.

  ಅಂಬಾನಿ ಮದುವೆಯಲ್ಲಿ

ಮೊದಲೆಲ್ಲ ಬಿಗಿಯಾದ, ಗ್ಲಾಮರಸ್ ಆದ ಉಡುಗೆಗಳನ್ನು ತೊಟ್ಟು ಓಡಾಡುತ್ತಿದ್ದ ದೀಪಿಕಾ ಪಡುಕೋಣೆ ಈಗ ಫ್ಯಾಷನ್ ಸೆನ್ಸ್​ ಅನ್ನು ಬದಲಾಯಿಸಿಕೊಂಡಿದ್ದಾರೆ.

   ಫ್ಯಾಷನ್ ಸೆನ್ಸ್​ ಬದಲು

ಇತ್ತೀಚೆಗೆ ನಿರ್ದೇಶಕಿ ಫರಾಹ್ ಖಾನ್ ಅನ್ನು ಭೇಟಿಯಾಗಲು ಬಂದಿದ್ದ ದೀಪಿಕಾ ಪಡುಕೋಣೆ ಹೂವುಗಳ ಚಿತ್ರದ ಉಡುಪೊಂದನ್ನು ಉಟ್ಟಿದ್ದರು.

 ನಿರ್ದೇಶಕಿ ಫರಾಹ್ ಖಾನ್

ರೇಷ್ಮೆಯಂತೆ ಮೃದುವಾಗಿದ್ದ ಈ ಉಡುಪಿನ ಬೆಲೆ ಸುಮಾರು 1.20 ಲಕ್ಷ ರೂಪಾಯಿಗಳಂತೆ. ಇದನ್ನು ವಿನ್ಯಾಸ ಮಾಡಿರುವುದು ಸಬ್ಯಸಾಚಿ.

ಉಡುಪಿನ ಬೆಲೆ ಎಷ್ಟು ಲಕ್ಷ?

ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಹೆಗಲಿಗೆ ನೇತು ಹಾಕಿಕೊಂಡಿರುವ ಬ್ಯಾಗಿನ ಬೆಲೆ 3.25 ಲಕ್ಷ ರೂಪಾಯಿಗಳು. ಇದು ಲೂಯಿ ವಿಟಾನ್ ಬ್ಯಾಗು.

    ಬ್ಯಾಗಿನ ಬೆಲೆ ಎಷ್ಟು?

ತಾಯಿ ಆಗಲಿರುವ ನಟಿ ದೀಪಿಕಾ ಪಡುಕೋಣೆ ಪ್ರಸ್ತುತ ಪ್ರವಾಸಗಳಲ್ಲಿ ತಮ್ಮನ್ನು ಬ್ಯುಸಿಯಾಗಿಟ್ಟುಕೊಂಡಿದ್ದಾರೆ. 

     ಪ್ರವಾಸಗಳಲ್ಲಿ ನಿರತ

ಶಾಹಿದ್ ಕಪೂರ್ ಪತ್ನಿ ಮೀರಾ ಧರಿಸಿರುವ ಉಡುಪಿನ ಬೆಲೆ ಎಷ್ಟು ಲಕ್ಷ?