ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಬಗ್ಗೆ

03 July 2024

Pic credit: Google

Vijayasarathy SN

ಸರ್ಕಾರದಿಂದಲೇ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಒಂದು. ಅತಿಹೆಚ್ಚು ಬಡ್ಡಿ ಸಿಗುವ ಸ್ಕೀಮ್ ಕೂಡ ಇದು.

ಎಸ್​ಸಿಎಸ್​ಎಸ್ ಬಡ್ಡಿ

Pic credit: Google

ವೃದ್ಧರಿಗೆಂದು ರೂಪಿಸಲಾಗಿರುವ ಯೋಜನೆ ಇದು. 60 ವರ್ಷ ಮೇಲ್ಪಟ್ಟ ವಯಸ್ಸಿನವರು, ಆಥವಾ ವಿಆರ್​ಎಸ್ ನಿವೃತ್ತಿ ಪಡೆದು 55 ವರ್ಷ ವಯಸ್ಸಾದವರು ಖಾತೆ ಆರಂಭಿಸಬಹುದು.

ವೃದ್ಧರಿಗಿರುವ ಸ್ಕೀಮ್

Pic credit: Google

ಅಂಚೆ ಕಚೇರಿ ಅಥವಾ ಬ್ಯಾಂಕ್​ನಲ್ಲಿ ಎಸ್​ಸಿಎಸ್​ಎಸ್ ಖಾತೆ ತೆರೆಯಬಹುದು. ಸರ್ಕಾರ ಸದ್ಯ ಇದಕ್ಕೆ ಶೇ. 8.2ರಷ್ಟು ವಾರ್ಷಿಕ ಬಡ್ಡಿ ನೀಡುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆಗೆ ಸಿಗುವಷ್ಟೇ ಬಡ್ಡಿ ಬರುತ್ತದೆ.

ಬಡ್ಡಿ ಶೇ. 8.2

Pic credit: Google

ಹಿರಿಯ ನಾಗರಿಕ ಉಳಿತಾಯ ಯೋಜನೆ ಅವಧಿ 5 ವರ್ಷ ಇರುತ್ತದೆ. ಅವಶ್ಯಕತೆ ಇದ್ದಲ್ಲಿ ಇನ್ನೂ 3 ವರ್ಷ ವಿಸ್ತರಿಸಬಹುದು. ಕನಿಷ್ಠ ಹೂಡಿಕೆ 1,000 ರೂ, ಗರಿಷ್ಠ ಹೂಡಿಕೆ 30 ಲಕ್ಷ ರೂ ಇದೆ.

ಐದು ವರ್ಷಕ್ಕೆ

Pic credit: Google

ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಖಾತೆಗಳನ್ನು ತೆರೆಯಬಹುದು. ಆದರೆ, ಒಂದು ಖಾತೆಗೆ ಒಮ್ಮೆ ಮಾತ್ರ ಹಣ ಜಮೆ ಮಾಡಬಹುದು. 1,000ರೂನಿಂದ 30 ಲಕ್ಷ ರೂವರೆಗೆ ಹೂಡಿಕೆ ಸಾಧ್ಯ.

30 ಲಕ್ಷದವರೆಗೆ ಹೂಡಿಕೆ

Pic credit: Google

ಈ ಸೇವಿಂಗ್ಸ್ ಸ್ಕೀಮ್​ನಲ್ಲಿ ನಿಮ್ಮ ಹೂಡಿಕೆಗೆ ಐದು ವರ್ಷ ನಿಮಗೆ ನಿಯಮಿತವಾಗಿ ಬಡ್ಡಿ ಆದಾಯ ಬರುತ್ತದೆ. 30 ಲಕ್ಷ ರೂ ಹೂಡಿಕೆಗೆ ಮೂರು ತಿಂಗಳಿಗೊಮ್ಮೆ 61,500 ರೂ ಬಡ್ಡಿ ಕೊಡಲಾಗುತ್ತದೆ. ತಿಂಗಳಿಗೆ 21,000 ರೂ ಆಗುತ್ತದೆ.

ತ್ರೈಮಾಸಿಕ ಆದಾಯ

Pic credit: Google

ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್​ನಲ್ಲಿ ಮಾಡುವ ಹೂಡಿಕೆಗೆ ಆದಾಯ ತೆರಿಗೆ ಸೆಕ್ಷನ್ 80ಸಿ ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇರುತ್ತದೆ.

ಟ್ಯಾಕ್ಸ್ ಡಿಡಕ್ಷನ್

Pic credit: Google