ಡ್ರಗ್ಸ್ ಪ್ರಕರಣದ ಆರೋಪಿ ನಟಿ ಹೇಮಾ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ

14 JUNE 2024

Author : Manjunatha

ಬೆಂಗಳೂರಿನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಭಾಗವಹಿಸಿ ಡ್ರಗ್ಸ್ ಸೇವಿಸಿದ್ದ ನಟಿ ಹೇಮಾ ಇಂದು ಬಿಡುಗಡೆ ಆಗಿದ್ದಾರೆ.

ರೇವ್ ಪಾರ್ಟಿಯಲ್ಲಿ ಭಾಗಿ

ಡ್ರಗ್ಸ್ ಸೇವನೆ ಮತ್ತಿತರೆ ಪ್ರಕರಣದಲ್ಲಿ ನಟಿ ಹೇಮಾ ಅವರನ್ನು ಜೂನ್ 3 ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು.

 ಜೂನ್ 3 ರಂದು ಬಂಧನ

ಆರೋಪಿ ನಟಿ ಹೇಮಾ ಕೊಲ್ಲಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. 

    ನ್ಯಾಯಾಂಗ ಬಂಧನ

ಆದರೆ ಹೇಮಾ ಪರ ವಕೀಲರು ವಾದ ಮಂಡಿಸಿದ ಮೇಲೆ ಜೂನ್ 12 ರಂದು ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು.

ಜೂನ್ 12ರಂದು ಜಾಮೀನು

ಜಾಮೀನು ಮಂಜೂರಾದ ಎರಡು ದಿನದ ಬಳಿಕ ನಟಿ ಹೇಮಾ ಅವರ ಬಿಡುಗಡೆ ಆಗಿದೆ. ಇಂದು ಅವರು ಜೈಲಿನಿಂದ ಹೊರಬಂದಿದ್ದಾರೆ.

  ಹೇಮಾ ಬಿಡುಗಡೆ ಆಗಿದೆ

ಷರತ್ತುಗಳನ್ನು ಪೂರೈಸಿ, ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲು ತಡವಾದ ಕಾರಣ ಎರಡು ದಿನ ತಡವಾಗಿ ಹೇಮಾ ಬಿಡುಗಡೆ ಪಡೆದಿದ್ದಾರೆ.

ತಡವಾಗಿ ಹೇಮಾ ಬಿಡುಗಡೆ

ಜೈಲಿನಿಂದ ಹೊರಬಂದ ಬಳಿಕ ತಮ್ಮ ಸಹೋದರನ ಜೊತೆಗೆ ಅವರು ಕಾರಿನಲ್ಲಿ ತೆರಳಿದ್ದಾರೆ. ಮಾಧ್ಯಮಗಳಿಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲಿಲ್ಲ.

    ಸಹೋದರನ ಜೊತೆಗೆ

ಎಲ್ಲವೂ ಮಾಧ್ಯಮದವರು ನೀವೇ ತೋರಿಸಿದ್ದೀರ, ಥ್ಯಾಂಕ್ಸ್ ಎಂದು ಸಿಟ್ಟಿನಿಂದ ಹೇಳಿ ಕಾರು ಹತ್ತಿ ಹೊರಟ ನಟಿ ಹೇಮಾ.

ಮಾಧ್ಯಮಗಳ ಮೇಲೆ ಸಿಟ್ಟು

ನಟಿ ಹೇಮಾ ಮೇಲೆ ಡ್ರಗ್ಸ್ ಸೇವನೆ, ಹಂಚಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ತೆಲುಗು ಕಲಾವಿದರ ಸಂಘದಿಂದ ಹೊರಗಿಡಲಾಗಿದೆ.

ತೆಲುಗು ಕಲಾವಿದರ ಸಂಘ

ಬಾಲಿವುಡ್ ಕಡೆ ಹೊರಟ ಶ್ರೀಲೀಲಾ, ಯಾರ ಜೊತೆ ಸಿನಿಮಾ?