ಬಾಲಿವುಡ್​ ಕಡೆ ಹೊರಟ ಶ್ರೀಲೀಲಾ, ಯಾರ ಜೊತೆ ಸಿನಿಮಾ?

14 JUNE 2024

Author : Manjunatha

ಕನ್ನಡದ ನಟಿ ಶ್ರೀಲೀಲಾ ಈಗ ಟಾಲಿವುಡ್​ನ ಸ್ಟಾರ್ ನಟಿ, ಒಂದರ ಹಿಂದೊಂದು ಹಿಟ್ ನೀಡಿದ್ದಾರೆ.

ಕನ್ನಡದ ನಟಿ ಶ್ರೀಲೀಲಾ

ಮಹೇಶ್ ಬಾಬು, ಪವನ್ ಕಲ್ಯಾಣ್, ನಂದಮೂರಿ ಬಾಲಕೃಷ್ಣ ಮುಂತಾದ ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ.

ಸ್ಟಾರ್ ನಟರೊಟ್ಟಿಗೆ ನಟಿ

ಶ್ರೀಲೀಲಾಗೆ ತೆಲುಗು ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇದೆ. ದೊಡ್ಡ ಸ್ಟಾರ್ ನಟರು ಶ್ರೀಲೀಲಾಗಾಗಿ ಕಾಯುತ್ತಿದ್ದಾರೆ.

    ತೆಲುಗು ಚಿತ್ರರಂಗದಲ್ಲಿ

ಇದರ ಮಧ್ಯೆ ನಟಿ ಶ್ರೀಲೀಲಾಗೆ ಬಾಲಿವುಡ್​ನಿಂದಲೂ ಬೇಡಿಕೆ ಬರುತ್ತಿದೆ. ಬಾಲಿವುಡ್ ನ ಯುವ ಸ್ಟಾರ್ ಜೊತೆ ಶ್ರೀಲೀಲಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್​ನಿಂದ ಬೇಡಿಕೆ

ಬಾಲಿವುಡ್​ನ ಯುವನಟ ಟೈಗರ್ ಶ್ರಾಫ್ ನಟಿಸಲಿರುವ ಹೊಸ ಸಿನಿಮಾಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ.

ಯುವನಟ ಟೈಗರ್ ಶ್ರಾಫ್

ಆಕ್ಷನ್-ರೊಮ್ಯಾಂಟಿಕ್ ಸಿನಿಮಾ ಇದಾಗಿದ್ದು, ಬಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆಯೊಂದು ಸಿನಿಮಾ ನಿರ್ಮಿಸುತ್ತಿದೆ.

  ಆಕ್ಷನ್-ರೊಮ್ಯಾಂಟಿಕ್ 

ಉತ್ತಮ ಅಭಿನಯ ಪ್ರತಿಭೆ, ಅತ್ಯುತ್ತಮ ಡ್ಯಾನ್ಸ್, ಸೌಂದರ್ಯ, ಗ್ಲಾಮರ್ ಎಲ್ಲವನ್ನೂ ಹೊಂದಿರುವ ಶ್ರೀಲೀಲಾ ಬಾಲಿವುಡ್​ನಲ್ಲೂ ಬೇಡಿಕೆಯ ನಟಿಯಾಗುವ ಸಾಧ್ಯತೆ ಇದೆ.

ಪ್ರತಿಭಾನ್ವಿತ ನಟಿ ಶ್ರೀಲೀಲಾ

ಎಂಬಿಬಿಎಸ್ ಪರೀಕ್ಷೆಯಿಂದಾಗಿ ಚಿತ್ರರಂಗದಿಂದ ಸಣ್ಣ ಬಿಡುವು ಪಡೆದಿದ್ದ ನಟಿ ಶ್ರೀಲೀಲಾ ಇದೀಗ ಮತ್ತೆ ಸಿನಿಮಾಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಚಿತ್ರರಂಗದಿಂದ  ಬಿಡುವು

ಶ್ರೀಲೀಲಾ ಪ್ರಸ್ತುತ ಎರಡು ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅದರಲ್ಲಿ ಒಂದು ಸಿನಿಮಾಕ್ಕೆ ರವಿತೇಜ ನಾಯಕ.

 ಎರಡು ತೆಲುಗು ಸಿನಿಮಾ

ಮದುವೆ ಬಳಿಕ ಮೊದಲ ಸಿನಿಮಾ ಒಪ್ಪಿಕೊಂಡ ‘ಗೂಗ್ಲಿ’ ಚೆಲುವೆ ಕೃತಿ ಕರಬಂಧ